ಈ ಪೌರಾಣಿಕ ಧಾರಾವಾಹಿಯ ಮೊದಲ ಪ್ರಸಾರದಲ್ಲಿ 25 ದೇಶಗಳಲ್ಲಿ ವೀಕ್ಷಿಸಿದ್ದರು. 500ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊದಲ ಪೌರಾಣಿಕ ಧಾರವಾಹಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಸಿನಿಮಾಗಳನ್ನು ಮೀರಿಸುವ ಅದ್ದೂರಿ ಸೆಟ್ ಗಳಲ್ಲಿ ಈ ಧಾರಾವಾಹಿ ಚಿತ್ರೀಕರಣಗೊಂಡಿದ್ದು ಇದರ ಹೆಮ್ಮೆ.
ಹಿಂದೆ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳ ಪ್ರಸಾರ ಸಮಯದಲ್ಲಿ ಜನ ಟಿವಿಗೆ ಪೂಜೆ ಮಾಡಿ ಹೇಗೆ ನೋಡುತ್ತಿದ್ದರೊ, ಹಾಗೆ ಈ ಧಾರಾವಾಹಿ ಪ್ರಸಾರ ಸಮಯದಲ್ಲೂ ಪೂಜೆ ಮಾಡಿ ನೋಡುತ್ತಿದ್ದರು.
ನೂರೈವತ್ತಕ್ಕೂ ಅಧಿಕ ದೇವರನಾಮಗಳನ್ನು ಬಳಸಿಕೊಂಡಿರುವುದು ಧಾರಾವಾಹಿ ವಿಶೇಷ. ರಾಯರ ಭಕ್ತರ ಹಾಗೂ ವೀಕ್ಷಕರ ಬಹುದಿನದ ಬೇಡಿಕೆಯನ್ನು ಸುವರ್ಣ ವಾಹನಿ ಪೂರೈಸುತ್ತಿದೆ.
Be the first to comment