ಸಿನಿಮಾ ಮತ್ತು ಮನರಂಜನಾತ್ಮಕ ವಿಚಾರಗಳನ್ನು ಜನರಿಗೆ ತಲುಪಿಸುವ ಧ್ಯೇಯವನ್ನಿಟ್ಟುಕೊಂಡು ಲೇಖನಗಳನ್ನು ಹೊರತರುವ ಕ್ರಿಯಾತ್ಮಕವಾದ ಕೆಲಸ ಮಾಡುತ್ತಿರುವ “ನಮ್ಮ ಸೂಪರ್ ಸ್ಟಾರ್ಸ್ “ ಕನ್ನಡ ಸಿನಿಮಾ ಮಾಸ ಪತ್ರಿಕೆ, ಮೊಟ್ಟಮೊದಲ ಬಾರಿಗೆ ನಾಟ್ಯ ಕಲೆಗಳ ಬೀಡು, ಕರ್ನಾಟಕದಲ್ಲಿ ನಾಟ್ಯ ಕ್ಷೇತ್ರದ ಕಲಾವಿದರನ್ನು ಪ್ರೋತ್ಸಾಹಿಸಲು “ನಾಟ್ಯ ರಾಣಿ ಶಾಂತಲಾ” ಪ್ರಶಸ್ತಿ ಕಾರ್ಯಕ್ರಮ ಮಾರ್ಚ ೨೭ ರಂದು ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.
“ಸ್ಟಾರ್ ಕನ್ನಡ” ದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ೧೬ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಜೊತೆ ವಿಶೇಷ ಚೇತನ ಮಕ್ಕಳು [ಕಣ್ಣು ಕಾಣಿಸದ, ಕಿವಿ ಕೇಳದ, ಮಾತು ಬಾರದ ಮಕ್ಕಳು], ಕರುನಾಡಿನ ಭರತನಾಟ್ಯ ಕ್ಷೇತ್ರದ ಕೆಲ ಗಣ್ಯರು ಹಾಗೂ ಚಲನಚಿತ್ರ ಕಲಾವಿದರು ಕೂಡ ಭಾಗಿಯಾಗಿ ನಾಟ್ಯ ಕಲಾವಿದರಿಗೆ ಸನ್ಮಾನಿಸಿದರು.
ಕೊನೆ ಹಂತಕ್ಕೆ 4 ನಾಟ್ಯ ಕಲಾವಿದರಾದ ಕು. ರೂಪಶ್ರೀ, ಕು. ಪೂಜಾ ಸಾತ್ನೂರ್ , ಕು. ಇಶಾನಿ ಶೆನಾಯ್ ಹಾಗೂ ಕು ಪದ್ಮ ವಿಜಯ್ ಆಯ್ಕೆ ಯಾಗಿ ತಮ್ಮ ನಾಟ್ಯದ ಮೂಲಕ ಗಮನ ಸೆಳೆದರು. ಕುತೂಹಲ ಭರಿತ ಕೊನೆ ಹಂತದಲ್ಲಿ ತೀರ್ಪುಗಾರರಾದ ದೇವು ರೂಪಾಂತರ, ಸೃಜನಾ ಗಾಯಿತ್ರಿ ಹಾಗೂ ಗುರು ಪ್ರಿಯಾ ಆನಂದ್ ರವರು ” ಕು.ಪೂಜಾ ಸಾತ್ನೂರ್” ರವರನ್ನು ಸ್ಟಾರ್ ಕನ್ನಡದ ” ನಾಟ್ಯ ರಾಣಿ ಶಾಂತಲಾ” ಪ್ರಶಸ್ತಿ ಯ ವಿಜೇತೆ ಯಂದು ಘೋಷಿಸಿದರು.
“ನಮ್ಮ ಸೂಪರ್ ಸ್ಟಾರ್ “ಕನ್ನಡದ ಮೊಟ್ಟಮೊದಲ ಆಗ್ ಮೆನ್ಟದ್ ರಿಯಾಲಿಟಿ ಟೆಕ್ನಾಲಜಿಯ ಸಿನಿಮಾ ಮಾಸ ಪತ್ರಿಕೆ, ವರ್ಣರಂಜಿತ ಮುದ್ರಣದಿಂದ ಓದುಗರನ್ನು ಆಕರ್ಷಿಸುತ್ತಿದ್ದು ಹಾಗೂ ಹೊರ ದೇಶಗಳ ಕನ್ನಡಿಗರಿಗೂ ಕೂಡ ಅಮೆರಿಕಾ, ಲಂಡನ್, ದುಬಾಯ್, ಆಸ್ಟ್ರೇಲಿಯಾ ಹಾಗೂ ಇಟಲಿ ದೇಶಗಳಲ್ಲಿ ಪತ್ರಿಕೆ ತಲುಪಿಸುತ್ತಿದ್ದೇವೆ ಎಂದು ಸ್ಮರಿಸಬಹುದು.
ಈ ವಿಶೇಷ ಕಾರ್ಯಕ್ರಮದ ಉಸ್ತುವಾರಿ ಸ್ಟಾರ್ ಕನ್ನಡ ಸಂಸ್ಥಾಪಕ ಅಸ್ ಲಮ್ ಸೂಪರ್ ಸ್ಟಾರ್ , ಬ್ರಾಂಡ್ ಅಂಬಾಸಿಡರ್ ಆಗಿ ಡಾ.ಜಯಲಕ್ಷ್ಮಿ ಜಿತೇಂದ್ರ, ನಿರ್ಮಾಪಕ ಸೆವೆನ್ ರಾಜ್, ನಟ ಲೀಲಾ ಮೋಹನ್ , ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಗಳಾದ ಶ್ವೇತಾ ನಂದಕುಮಾರ್, ಸ್ತ್ರೀ ಬೋಟಿಕ್ ಸುಧಾ, ಟನ್೯ ಸ್ಟೈಲ್ ಸಲೂನ್ ಹಾಗೂ ಮೇಕ್ ಒವರ್ ಸ್ಟುಡಿಯೋ ಸವಿತಾ, ಕ್ಯಾಡ್ ನೆಸ್ಟ್ ನ ಪ್ರಕಾಶ್ ಗೌಡ, ನಟ ಶಶಿ ಶೇಖರ್ ಪ್ರೋತ್ಸಾಹ ನೀಡಿದರು.
Be the first to comment