ಕರುನಾಡಿನ ವರನಟ ಡಾ.ರಾಜ್‍ಕುಮಾರ್‍ರ ಮೂವರು ಪುತ್ರರು ಕೂಡ ಈಗ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಮೂಲಕ ಧಾರಾವಾಹಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ, ಈಗ ರಾಘವೇಂದ್ರರಾಜ್‍ಕುಮಾರ್ ಅವರು ತಮ್ಮ ಪೂರ್ಣಿಮಾ ಎಂಟರ್‍ಪ್ರೈಸಸ್ ಮೂಲಕ ಮರಳಿ ಬಂದಳು ಸೀತೆ ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.ಹೇಮಂತ್‍ಹೆಗ್ಡೆ ಅವರ ಕಥೆ, ಚಿತ್ರಕಕಥೆ ಇರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಧರಣೀಶ್ ಆ್ಯಕ್ಷನ್ ಕಟ್ ಹೇಳಿದ್ದು ಇದೇ 25 ರಿಂದ ಮರಳಿ ಬಂದಳು ಸೀತೆ ಧಾರಾವಾಹಿಯು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಘವೇಂದ್ರರಾಜಕುಮಾರ್ ಶ್ರೀಮತಿ ಮಂಗಳಾ ಯುವ ರಾಜಕುಮಾರ ಹಾಗೂ ವಿನಯ ರಾಜಕುಮಾರ ಹಾಜರಿದ್ದು ಈ ಧಾರಾವಾಹಿ ಕುರಿತಂತೆ ಮಾತನಾಡಿದರು.ನಿರ್ಮಾಪಕ ರಾಘವೇಂದ್ರರಾಜ್‍ಕುಮಾರ್ ಮಾತನಾಡಿ, ಅಪ್ಪಾಜಿಯ ತ್ರಿಮೂರ್ತಿ ಚಿತ್ರವನ್ನು ನಿರ್ಮಿಸುವ ಮೂಲಕ ನಮ್ಮ ತಾಯಿ ಪೂರ್ಣಿಮಾ ಎಂಟರ್‍ಪ್ರೈಸಸ್ ಅನ್ನು ಹುಟ್ಟುಹಾಕಿದರು. ಆ ಪ್ರೊಡಕ್ಷನ್‍ನಡಿ ಅನೇಕ ಸದಭಿರುಚಿ ಚಿತ್ರಗಳು ಹೊರಬಂದಿದೆ, ಈಗ ಮರಳಿ ಬಂದಳು ಸೀತೆ ಎಂಬ ಸೀರಿಯಲ್ ನಿರ್ಮಿಸಿದ್ದೇವೆ.ಸಿನಿಮಾವನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ, ಆದರೆ ಧಾರಾವಾಹಿಗಳನ್ನು ನಾವೇ ಪ್ರೇಕ್ಷಕರ ಬಳಿಗೆ ಕೊಂಡೊಯ್ಯಬೇಕು, ಸೀರಿಯಲ್ ಪ್ರೇಕ್ಷಕರಿಗೆ ಇಷ್ಟವಾದರೆ ಕಂತುಗಳ ಸಂಖ್ಯೆ ಹೆಚ್ಚಾಗುತ್ತದೆ ಇಲ್ಲದಿದ್ದರೆ ಬಲುಬೇಗ ಕಾಣೆಯಾಗಬೇಕಾಗುತ್ತದೆ ಎಂದು ನಮ್ಮ ಅಮ್ಮ ಹೇಳುತ್ತಿದ್ದರು ಎಂದು ರಾಘಣ್ಣ ಭಾವುಕರಾದರು.
ಯುವರಾಜ್‍ಕುಮಾರ್ ಮಾತನಾಡಿ, ಮರಳಿ ಬಂದಳು ಸೀತೆ ಚಿತ್ರಕ್ಕೆ ಎಲ್ಲರ ಶ್ರಮವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸದಭಿರುಚಿ ಸೀರಿಯಲ್‍ಗಳನ್ನುಪ ನಿರ್ಮಿಸುವ ಆಸೆ ಹೊಂದಿದ್ದೇವೆ ಎಂದರು. ವಿನಯರಾಜ್‍ಕುಮಾರ್ ಮಾತನಾಡಿ, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ, ಕಥೆಗೆ ನನ್ನ ಪಾತ್ರದಿಂದ ತಿರುವು ಸಿಕ್ಕುತ್ತದೆ, ನಮ್ಮ ಪ್ರೊಡಕ್ಷನ್ಸ್ ಹೌಸ್‍ನಿಂದ 10 ವರ್ಷಗಳ ನಂತರ ಮೂಡಿಬರುತ್ತರುವ ಧಾರಾವಾಹಿ ಇದು.ಈ ಟೈಟಲ್ ತುಂಬಾ ಕುತೂಹಲ ಮೂಡಿಸುತ್ತದೆ. ನಮ್ಮ ಸಮಾಜವನ್ನು ಬದಲಾವಣೆ ಮಾಡಲು ರಾಮ ಬೀಮ ಎಲ್ಲರೂ ಬರಬೇಕು. ಈಗ ಸೀತೆ ಬಂದಿದ್ದಾಳೆ ಎಂದು ಹೇಳಿದರು.
ಹೇಮಂತ ಹೆಗ್ಡೆ ಈ ಧಾರಾವಾಹಿಗೆ ಕಥೆ-ಚಿತ್ರಕಥೆ ರಚಿಸಿದ್ದಾರೆ. ಮಧುಬಾಲಾ, ಕೌಶಿಕನಾಗಾರ್ಜುನ, ಅಶ್ಚಿನಿಗೌಡ, ಅಪೇಕ್ಷಾ ಪುರೋಹಿತ, ಹೇಮಾ ಬೆಳ್ಳೂರು, ರಕ್ಷಿತಾ ಮುಂತಾದವರು ಮರಳಿ ಬಂದಳು ಸೀತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸ್ಟಾರ್ ಸುವರ್ಣವಾಹಿನಿಯ ಬ್ಯುಸಿನೆಸ್ ಹೆಡ್ ಸಾಯಿ ಪ್ರಸಾದ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
Pingback: this content