“ಸಾಲ್ಟ್” ಚಿತ್ರ ಮೆಚ್ಚಿದ ನಾದಬ್ರಹ್ಮ ಹಂಸಲೇಖ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಸಾಲ್ಟ್’ ಚಿತ್ರವನ್ನು ವೀಕ್ಷಿಸಿದ ನಾದಬ್ರಹ್ಮ ಹಂಸಲೇಖಾ ತಮ್ಮ ಮಾತಿನಲ್ಲಿ ಸಂಪೂರ್ಣ ಮನರಂಜನೆ ಕೊಡುವ ಚಿತ್ರವಾಗಿದೆ. ನೋಡುಗನಿಗೆ ಖಂಡಿತ ಪೈಸಾ ವಸೂಲ್ ಆಗುತ್ತದೆ ಎಂದು ಕಲಾವಿದರು, ತಂತ್ರಜ್ಘರೊಂದಿಗೆ ಔಪಚಾರಿಕವಾಗಿ ಮಾತನಾಡಿ ಶುಭ ಹಾರೈಸಿರುವುದು ತಂಡಕ್ಕೆ ಆನೆಬಲ ಬಂದಂತೆ ಆಗಿದೆ.

ಸತ್ಯ-ಅಕುಲ್-ಲೋಕಿ-ತ್ರಿನೇತ್ರ ಈ ನಾಲ್ಕು ಪಾತ್ರಗಳ ಮಿಶ್ರಣವು ಚಿತ್ರವನ್ನು ಕರೆದುಕೊಂಡು ಹೋಗುತ್ತದೆ. ಅಡುಗೆಗೆ ರುಚಿ ಎಷ್ಟು ಮುಖ್ಯವೋ, ಅದೇ ರೀತಿ ಸಿನಿಮಾವು ಮನಸ್ಸಿಗೆ ಮುದ ಕೊಡುತ್ತದೆಂದು ಸುದ್ದಿಗೋಷ್ಟಿಯಲ್ಲಿ ಎಲ್ಲರು ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಟ್ರೈಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಯಿತು.

ರಚನೆ, ನಿರ್ದೇಶನ ಮಾಡಿರುವ ಭರತ್‌ನಂದ ಬಣ್ಣ ಹಚ್ಚಿದ್ದು ಅವರೊಂದಿಗೆ ಚೇತನ್‌ಕುಮಾರ್, ಚಂದ್ರುಛತ್ರಪತಿ, ಸತೀಶ್‌ಮಳವಳ್ಳಿ ನಾಯಕರುಗಳು. ತಾರಗಣದಲ್ಲಿ ಬಲರಾಜವಾಡಿ, ಸಂದೀಪ್, ವಿಜಯಶ್ರೀಕಲಬುರ್ಗಿ, ಯಶಸ್ವಿನಿಶೆಟ್ಟಿ, ರಶ್ಮಿತಗೌಡ, ಸುರ್ಯೋದಯ್‌ಪೆರಂಪಳ್ಳಿ, ಚಕ್ರವರ್ತಿದಾವಣಗೆರೆ, ಹರ್ಷ ಮುಂತಾದವರು ಬಣ್ಣ ಹಚ್ಚಿದ್ದಾರೆ.

ರಾಘವೇಂದ್ರಕಾಮತ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಯಲಸ್ಟಿನ್-ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಂತೋಷ್‌ದಯಾಲನ್, ಸಂಕಲನ ವಿನಯ್‌ಕುಮಾರ, ನೃತ್ಯ ಮದುಸುಧನ್, ಸಂಭಾಷಣೆ ಸತೀಶ್‌ಮಳವಳ್ಳಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಶಾಲಿನಿ.ಎಂ. ಅವರು ರಾಜರತ್ನ ಸ್ಟುಡಿಯೋ ಮೂಲಕ ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆ ತೆರೆಗೆ ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!