‘ಸೇಂಟ್ ಮಾರ್ಕ್ಸ್ ರಸ್ತೆ’ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ

‘ಸೇಂಟ್ ಮಾರ್ಕ್ಸ್ ರಸ್ತೆ’ ಫಸ್ಟ್ ಲುಕ್ ಅನಾವರಣಗೊಳಿಸಿದ ಸೂಪರ್‍ಸ್ಟಾರ್ ಉಪೇಂದ್ರ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಹೆಚ್ಚಾಗಿ ಬರುತ್ತಿದೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ `ಸೇಂಟ್ ಮಾರ್ಕ್ಸ್ ರಸ್ತೆ` ಭರತನ್ ಚಿತ್ರಗಳು ಲಾಂಛನದಲ್ಲಿ ಆರ್.ವಿ..ಭರತನ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ¥sóÀಸ್ಟ್‍ಲುಕ್ ಅನಾವರಣಗೊಳಿಸಿದ್ದಾರೆ ಸೂಪರ್‍ಸ್ಟಾರ್ ಉಪೇಂದ್ರ.

ನೈಜ ಘಟನೆ ಆಧಾರಿತ, ಹಾರಾರ್ ಥ್ರಿಲ್ಲರ್ ಕಥಾಹಂದರವುಳ್ಳ ಈ ಚಿತ್ರವನ್ನು ಮ್ಯಾಗ್ವೆನ್ ಅವರು ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ 29ದಿನಗಳ ಚಿತ್ರೀಕರಣ ನಡೆದಿದೆ.
ಮೂರು ಹಾಡುಗಳು ಹಾಗೂ ಒಂದು ಪೆÇ್ರೀಮೊ ಸಾಂಗ್ ಈ ಚಿತ್ರದಲ್ಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಸೂರಜ್ ನಲ್ಲುಸ್ವಾಮಿ ಛಾಯಾಗ್ರಹಣ, ಪ್ರೀತಿಮೋಹನ್ ಸಂಕಲನ, ವಿಕ್ಕಿ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಹರಿಕಿರಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಿಯಾಂಕ ಉಪೇಂದ್ರ, ಮಹತ್ ರಾಘವೇಂದ್ರ, ಯಾಶಿಕಾ ಆನಂದ್, ಸರ ವೆಂಕಟೇಶ್, ಮಾ ಕಾ ಷ ಆನಂದ್, ಮನೋಬಾಲ, ಕೆ.ಎಸ್.ರವಿಕುಮಾರ್, ರಂಗಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: Unicc

Leave a Reply

Your email address will not be published. Required fields are marked *

Translate »
error: Content is protected !!