‘ಎಲ್ಲಿದ್ದೆ ಇಲ್ಲಿ ತನಕ’…. ಇದು ಲೋಕೇಶ್ ಅಭಿನಯದ ‘ಪರಸಂಗದ ಗೆಂಡೆ ತಿಮ್ಮ’ ಸಿನಿಮಾದ ಹಾಡಿನ ಸಾಲು. ಅಪ್ಪನ ಸಿನಿಮಾದ ಹಾಡಿನ ಸಾಲನ್ನೇ ಸೃಜನ್ ಲೋಕೇಶ್ ತಮ್ಮ ಚಿತ್ರಕ್ಕೆ ಶೀರ್ಷಿಕೆ ಆಗಿ ಇಟ್ಟುಕೊಂಡಿದ್ದಾರೆ.
‘ಮಜಾ ಟಾಕೀಸ್’ ಕಂತುಗಳ ನಿರ್ದೇಶಕ ತೇಜಸ್ವಿ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಜಾ ಟಾಕೀಸ್ ರಿಯಾಲಿಟಿ ಶೋಗೆ ಸಂಭಾಷಣೆ ಬರೆದಿರುವರು ರಾಕೇಶ್ ಈ ಕಮರ್ಷಿಯಲ್ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಸಾಹಸಗಳಿವೆ, ಐದು ಹಾಡುಗಳು, ಪ್ರೀತಿಯನ್ನು ಉಳಿಸಿಕೊಳ್ಳಲು ಪಡುವ ಸಾಹಸ ಕಥೆಯಲ್ಲಿ ಅಡಕವಾಗಿದೆ.
ಈ ಚಿತ್ರವನ್ನು ಸೃಜನ್ ಲೋಕೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
ಲೋಕೇಶ್ ಪ್ರೊಡಕ್ಷನ್ ರಂಗಭೂಮಿಯಲ್ಲಿ ಅಲ್ಲದೆ, ಕಿರುತೆರೆಯಲ್ಲಿ ಮಜಾ ಟಾಕೀಸ್ ಶೋ ನಿರ್ಮಾಣದ ಮೂಲಕ ಅತ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ. ಸೃಜನ್ ಲೋಕೇಶ್ ಸಿನಿಮಾದಲ್ಲಿ ಗಳಿಸಲಾಗದೆ ಇದ್ದದ್ದನ್ನು ಕಿರುತೆರೆಯಿಂದ ಸಂಪಾದಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಸಾಧು ಕೋಕಿಲ, ರಾಧಿಕ ರಾವ್, ತಾರಾ ಅನುರಾದ, ಅವಿನಾಷ್, ತಬಲಾ ನಾಣಿ, ಗಿರಿ ಹಾಗೂ ಇತರರು ಇದ್ದಾರೆ. 45 ದಿವಸಗಳ ಚಿತ್ರೀಕರಣ ಆಸ್ಟ್ರೇಲಿಯ ದೇಶಕ್ಕೂ ಹೋಗಿ ಬರಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಎಚ್.ಸಿ. ವೇಣು ಛಾಯಾಗ್ರಾಹಕರು.
Be the first to comment