ಗೋಲ್ಡನ್ ಕ್ವೀನ್ ಅಮೂಲ್ಯ ಇದೀಗ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದು, ‘ಪೀಕಬೂ’ ಚಿತ್ರದ ಮೂಲಕ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಚೆಲುವಿನ ಚಿತ್ತಾರ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಮೂಲ್ಯ ಮದುವೆ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ‘ಪೀಕಬೂ’ ಚಿತ್ರತಂಡ ಅಮೂಲ್ಯ ಅವರಿಗೆ ಜೋಡಿಯಾಗಿ ಶ್ರೀರಾಮ್ ಅವರನ್ನು ಘೋಷಿಸಿದೆ.
ಸಂಕ್ರಾಂತಿ ವಿಶೇಷ ಸುಗ್ಗಿ ಸಂಭ್ರಮದಲ್ಲಿ ಚಿತ್ರತಂಡ ನಾಯಕನನ್ನು ಪರಿಚಯಿಸುವ ವಿಶೇಷ ಟೀಸರ್ ಬಿಡುಗಡೆ ಮಾಡಿದೆ. ಶ್ರೀಮಾದೇವ್ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಶ್ರೀರಾಮ್ ಚಿತ್ರರಂಗಕ್ಕೆ ಹೊಸಬರಲ್ಲ. ಇರುವದೆಲ್ಲವ ಬಿಟ್ಟು, ಗಜಾನನ, ಗ್ಯಾಂಗ್, ಹೊಂದಿಸಿ ಬರೆಯಿರಿ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪೀಕಬೂ ಚಿತ್ರದ ಮೂಲಕ ಅವರು ಹೆಸರನ್ನು ಶ್ರೀರಾಮ್ ಎಂದು ಬದಲಿಸಿದ್ದಾರೆ.
ಶ್ರಾವಣಿ ಸುಬ್ರಹ್ಮಣ್ಯ ಚಿತ್ರ ನಿರ್ದೇಶಿಸಿದ್ದ ಮಂಜು ಸ್ವರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೀಕಬೂ ಚಿತ್ರವನ್ನು ಗಣೇಶ್ ಕೆಂಚಂಬ ಅವರು ಶ್ರೀ ಕೆಂಚಂಬ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
‘ಪೀಕಬೂ’ ಚಿತ್ರದ ಶೇ. 60 ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ತಂಡ ಚಿತ್ರೀಕರಣದ ಜೊತೆಗೆ ಪ್ರಚಾರವನ್ನು ಪ್ರಾರಂಭಿಸಿದೆ. ಚಿತ್ರಕ್ಕೆ ಛಾಯಾಗ್ರಾಹಕರಾಗಿ ಸುರೇಶ್ ಬಾಬು, ಸಂಗೀತ ಸಂಯೋಜಕರಾಗಿ ವೀರ್ ಸಮರ್ಥ್, ಶ್ರೀಧರ್ ಕಶ್ಯಪ್, ಸಂಕಲನಕಾರರಾಗಿ ಎನ್.ಎಂ. ವಿಶ್ವಾಸ್ ಇದ್ದಾರೆ.
—-





Be the first to comment