Srinivasa murthy: ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ ಎಂದು ಬೇಸರಿಸಿದ ಹಿರಿಯ ನಟ

ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರು ವರನಟ ಡಾ. ರಾಜ್‌ ಕುಮಾರ್‌ ಪ್ರಶಸ್ತಿ ಇನ್ನೂ ನೀಡದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಶ್ರೀನಿವಾಸ್ ಮೂರ್ತಿ ಅವರಿಗೆ ಕರ್ನಾಟಕ ಸರಕಾರ 2018ರಲ್ಲಿ ಡಾ. ರಾಜ್ ಕುಮಾರ್ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ ಪ್ರಶಸ್ತಿ ಘೋಷಣೆಯಾಗಿ ಐದು ವರ್ಷ ಕಳೆದರೂ, ಇದುವರೆಗೂ ಪ್ರಶಸ್ತಿ ಪ್ರದಾನ ಮಾಡಿಲ್ಲ. ಇದು ಅವರಿಗೆ ಬೇಸರ ತರಿಸಿದೆ.

2017ರ ಕಾರ್ಯಕ್ರಮ ಮಾಡಿದ್ದೇ ಕೊನೆ. ಆ ನಂತರದ ಪ್ರಶಸ್ತಿಗಳ ಘೋಷಣೆ ಮಾಡಿದ್ದರೂ, ಇನ್ನೂ ಸಮಾರಂಭ ಮಾಡಿ ಪ್ರಶಸ್ತಿ ಕೊಟ್ಟಿಲ್ಲ. ಡಾ. ರಾಜ್ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿ ಪಡಬೇಕು. ಆದರೆ ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ. ಯಾರನ್ನು ಕೇಳುವುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಶ್ರೀನಿವಾಸಮೂರ್ತಿ ಇದುವರೆಗೂ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 32 ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಕವಿರತ್ನ ಕಾಳಿದಾಸ’ ಚಿತ್ರದ ಭೋಜರಾಜನ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ.

ರಂಗಭೂಮಿ ಕಲಾವಿದನಾಗಿ ಆನಂತರ ಚಿತ್ರರಂಗದಲ್ಲಿ ನಾಯಕ, ನಿರ್ಮಾಪಕ, ಪೋಷಕ ಕಲಾವಿದನಾಗಿ ಗುರುತಿಸಿಕೊಂಡಿರುವಶ್ರೀನಿವಾಸ ಮೂರ್ತಿ ಅವರಿಗೀಗ 75 ವರ್ಷ. ಇದೇ ವರ್ಷ ಅವರು ಬಣ್ಣದ ಬದುಕಿಗೆ ಕಾಲಿಟ್ಟು 50 ವರ್ಷವಾಗುತ್ತಿದೆ.

ಈ ಬಾರಿಯಾದರೂ ರಾಜ್ಯ ಸರಕಾರ ಪ್ರಶಸ್ತಿ ವಿತರಣೆ ಮಾಡುತ್ತದೆಯೇ ಎಂದು ಕಾದು ನೋಡಬೇಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!