ತೆಲುಗಿನ ಕಡೆಗೆ ಹೊರಟ ಶ್ರೀನಿಧಿ ಶೆಟ್ಟಿ

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ತೆಲುಗು ಚಿತ್ರದಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ.

ಕೆಜಿಎಫ್ ಸಿನಿಮಾ ಹಿಟ್ ಆದರೂ ಶ್ರೀನಿಧಿ ಶೆಟ್ಟಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಲಭಿಸಲಿಲ್ಲ. ಈಗ ಅವರು ನಡೆಸುತ್ತಿರುವ ತೆಲುಗು ಚಿತ್ರ ತೆಲುಸು ಕದಾ ಇದರ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

ಇದು ಶ್ರೀನಿಧಿ ಶೆಟ್ಟಿ ಅವರ ನಾಲ್ಕನೆಯ ಸಿನಿಮಾ ಆಗಿದೆ. ಈ ಹಿಂದೆ ಅವರು ಕೆಜಿಎಫ್ 1,2, ತಮಿಳಿನ ಕೋಬ್ರಾ ಚಿತ್ರಗಳಲ್ಲಿ ನಟಿಸಿದ್ದರು.

ಚೆಲುವಿನ ಹೊಸ ಸಿನಿಮಾದಲ್ಲಿ ಸಿದ್ದು ಜೊನ್ನಲಗಡ್ಡ ಅವರು ನಾಯಕ ಆಗಿ ನಟಿಸುತ್ತಿದ್ದಾರೆ. ಹೊಸ ಚಿತ್ರದಲ್ಲಿ ರಾಶಿ ಖನ್ನಾ ಅವರು ನಟಿಸುತ್ತಿದ್ದಾರೆ.

ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿದ್ದು, ತೆಲುಗು ನಟರಾದ ನಾನಿ, ನಿತಿನ್ ಅವರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

ತೆಲುಗು ಚಿತ್ರದ ನಂತರ ಶ್ರೀನಿಧಿ ಶೆಟ್ಟಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುವ ನಿರೀಕ್ಷೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!