ಬಸಮ್ಮ ಪಾತ್ರದಲ್ಲಿ ಶ್ರೀನಗರ ಕಿಟ್ಟಿ

ಸೋಲು-ಗೆಲುವು  ಎಲ್ಲವನ್ನೂ ಕಂಡಿರುವ ಶ್ರೀನಗರ ಕಿಟ್ಟಿ ‘ವೇಷಗಳು’ ಅನ್ನೋ ಸಿನಿಮಾ ಒಪ್ಪಿಕೊಂಡಿದ್ದಾರೆ.

ಶ್ರೀನಗರ ಕಿಟ್ಟಿ  ಬಸಮ್ಮ ಪಾತ್ರದಲ್ಲಿ ಸಿನಿಮಾ ರಂಗದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.  ‘ವೇಷಗಳು’ ಕಿಟ್ಟಿಅವರದೇ ಚಿತ್ರ.  ಶ್ರೀನಗರ ಕಿಟ್ಟಿ ಮತ್ತು ಭಾವನ ಬೆಳಗೆರೆ ಇಬ್ಬರೂ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ರವಿಬೆಳಗೆರೆ ಮತ್ತು ಲಲಿತಾ ಬೆಳಗೆರೆ ಅವರ ಆಶೀರ್ವಾದ ಈ ಸಿನಿಮಾ ತಂಡದ ಮೇಲಿದೆ.

ಚಿತ್ರಕ್ಕೆ ರವಿಬೆಳಗೆರೆ ಅವರ ಮೂಲಕಥೆ ಇದೆ. ವಿಶೇಷ ಅಂದರೆ ರವಿಬೆಳಗೆರೆ ಅವರ ‘ವೇಷಗಳು’ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಕಿಶನ್ ರಾವ್ ದಳವಿ ನಿರ್ದೇಶನ,  ಗ್ರೀನ್ ಟ್ರೀ ಸ್ಟುಡಿಯೋಸ್ ಅವರ ನಿರ್ಮಾಣ,  ವಿದ್ವಾನ್ ಕೌಶಿಕ್ ಸಂಗೀತ, ರಾಜ್ ಗುರು, ಸೌಜನ್ಯದತ್ತರಾಜು ಅವರ ಸಂಭಾಷಣೆ ಇದೆ.

ಶ್ರೀನಗರ ಕಿಟ್ಟಿ ಬಣ್ಣ ಹಚ್ಚುವ ಮೂಲಕ ತೆರೆ ಮೇಲೆ ತಮ್ಮದೇ ಆದ ಛಾಪು ಮೂಡಿಸಿದವರು. ಕಿಟ್ಟಪ್ಪ ಹೊಸ ವೇಷದೊಂದಿಗೆ ಎಂಟ್ರಿಯಾಗ್ತಾ ಇದ್ದಾರೆ. ಅವರ ‘ ವೇಷಗಳು’ ಜನಮನ ಗೆಲ್ಲಲಿ. ರಂಗಪ್ರತಿಭೆಗಳ ಅನಾವರಣ ಈ ಸಿನಿಮಾ ಮೂಲಕ ಆಗಲಿ ಎಂದು ಚಿತ್ರ ಪ್ರೇಮಿಗಳು ಶುಭ ಹಾರೈಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!