ಪುನೀತ್ ರುದ್ರನಾಗ್ ನಿರ್ದೇಶನದ ಐತಿಹಾಸಿಕ ಸಿನಿಮಾದಲ್ಲಿ ಶ್ರೀಮುರುಳಿ ನಾಯಕನಾಗಿದ್ದಾರೆ.
ಚಿತ್ರವು 500 ವರ್ಷಗಳ ಹಿಂದೆ ನಡೆದ ಕಥೆಯಾಗಿದೆ, ಇದುವರೆಗೂ ಈ ರೀತಿ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
2024 ರಲ್ಲಿ ತೆರೆಕಂಡ ‘ಬಘೀರಾ’ ಚಿತ್ರದ ಯಶಸ್ಸಿನ ನಂತರ ಶ್ರೀಮುರಳಿ ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ಮುರಳಿಯನ್ನು ಹಲವು ವರ್ಷಗಳಿಂದ ಬಲ್ಲ ಪುನೀತ್ ರುದ್ರನಾಗ್, ಮುರುಳಿಗೆ ಹೊಂದಿಕೆಯಾಗುವ ಕಥೆಯನ್ನು ರಚಿಸಿದ್ದಾರೆ.
‘ಬಘೀರಾ’ , ‘ಎಕ್ಕಾ’ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಪುನೀತ್ ರುದ್ರನಾಗ್ ನಟಿಸಿದ್ದಾರೆ. ಕೆಜಿಎಫ್ 1 ರಲ್ಲಿ ಪ್ರಶಾಂತ್ ನೀಲ್ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸುರಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಯರಾಮ್ ದೇವಸಮುದ್ರ ಈ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ.
ಸಂಕೇತ್ (ಮೈಸ್) ಚಿತ್ರದ ಛಾಯಾಗ್ರಹಣ, ಅಮರ್ ಕಲಾ ವಿಭಾಗ, ಸಲಾರ್ ಚಿತ್ರದ ದೃಶ್ಯ ಪರಿಣಾಮಗಳನ್ನು ನಿರ್ವಹಿಸಿದ ನಿರ್ಮಲ್ ಕುಮಾರ್ ಈ ಪ್ರಾಜೆಕ್ಚ್ ಗೆ ಸಹಕರಿಸಲಿದ್ದಾರೆ.
ನವೆಂಬರ್‌ನಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ಅಧಿಕೃತ ಘೋಷಣೆ ಹೊರಬೀಳಲಿದೆ. ಪ್ರಸ್ತುತ ಶ್ರೀಮುರಳಿ ಪರಾಕ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
—-





Be the first to comment