ಜ.25ಕ್ಕೆ ‘ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಹಿರಿಯ ಸಿನಿಮಾ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಅವರು ಆರಂಭಿಸಿ ಬೆಳೆಸಿದ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿಗೆ ಈ ವರ್ಷ ಇಪ್ಪತೈದರ ಹರುಷ. ಅತಿ ಹೆಚ್ಚು ಚಿತ್ರಗಳಿಗೆ ಈ ಸಂಸ್ಥೆ ಪ್ರಚಾರದ ಸೇವೆ ನೀಡಿರುವುದು ಹೆಮ್ಮೆಯ ವಿಷಯ. ಡಿ.ವಿ.ಸುಧೀಂದ್ರ ಅವರ ನಂತರ ಅವರ ಮಗ ಸುನಿಲ್ ಹಾಗು ಅವರ ತಮ್ಮನ ಮಗ ಸುಧೀಂದ್ರ ವೆಂಕಟೇಶ್, ಹಿರಿಯರು ತೋರಿದ ಮಾರದರ್ಶನದಿಂದ ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಸಂಸ್ಥೆಯ ಮತ್ತೊಂದು ಗರಿ ಎಂದರೆ ಪ್ರತಿ ವರ್ಷವೂ ಚಿತ್ರರಂಗದಲ್ಲಿನ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿರುವುದು.

ಶ್ರೀ ರಾಘವೇಂದ್ರ ಚಿತ್ರವಾಣಿ 21ನೆ ಹಾಗು 22ನೆ ವರ್ಷದ ಪ್ರಶಸ್ತಿ ಪ್ರಕಟಿಸಿದೆ. ಇದೆ ತಿಂಗಳಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿವಿಜೇತರನ್ನು ಗೌರವಿಸಲಿದೆ. ಕಳೆದ ಎರಡು ವರ್ಷದಿಂದ ಕರೋನ ಕಾರಣದಿಂದಾಗಿ ಈ ಪ್ರಶಸ್ತಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕಳೆದ ಎರಡು ವರ್ಷದ ಪ್ರಶಸ್ತಿಗಳನ್ನು 21ನೆ ಹಾಗು 22ನೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳನ್ನು ಎಂದಿನಂತೆ ಸಾಂಪ್ರದಾಯಿಕವಾಗಿ ಈ ಸಂಸ್ಥೆ ಹಮ್ಮಿಕೊಂಡಿದೆ.

2021 ಹಾಗೂ 2022ರ ಪ್ರಶಸ್ತಿಗೆ ಪಡೆದವರ ವಿವರ :

ಶ್ರೀ ಪಿ. ಧನರಾಜ್ (ಹಿರಿಯ ಚಲನಚಿತ್ರ ನಿರ್ಮಾಪಕರು) – ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ 2021,

ಶ್ರೀ ಈಶ್ಚರ ದೈತೋಟ (ಹಿರಿಯ ಪತ್ರಕರ್ತರು) – ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, 2022

ಶ್ರೀ ಕುಮಾರ್ ಗೋವಿಂದ್ (ಹಿರಿಯ ನಟ-ನಿರ್ಮಾಪಕರು) – ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ 2021,

ಶ್ರೀ ಸದಾಶಿವ ಶೆಣೈ (ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು) – ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ 2022.

ಶ್ರೀ ರಾಜೇಶ್ ಕೃಷ್ಣನ್ ಖ್ಯಾತ ಹಿನ್ನೆಲೆ ಗಾಯಕರು – ಡಾ. ರಾಜಕುಮಾರ್ ಪ್ರಶಸ್ತಿ (ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಕುಟುಂಬದವರಿಂದ).

ಶ್ರೀ ಸಾಯಿಪ್ರಕಾಶ್ ಹಿರಿಯ ನಿರ್ದೇಶಕರು-ನಿರ್ಮಾಪಕರು – ‘ಯಜಮಾನ’ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ (ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರಿಂದ).

ಶ್ರೀಮತಿ ತುಳಸಿ (ಹಿರಿಯ ನಟಿ) – ಖ್ಯಾತ ಅಭಿನೇತ್ರಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ.

ಶ್ರೀ ನೋಬಿನ್ ಪಾಲ್ ಅತ್ಯುತ್ತಮ ಸಂಗೀತ ನಿರ್ದೇಶನ, ‘777 ಚಾರ್ಲಿ’ ಚಿತ್ರಕ್ಕಾಗಿ – ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಪ್ರಶಸ್ತಿ.

ಶ್ರೀ ಮಧುಚಂದ್ರ ಅತ್ಯುತ್ತಮ ಕಥಾಲೇಖಕರು, ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರಕ್ಕಾಗಿ – ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ ಕೆ.ವಿ. ಜಯರಾಂ ಪ್ರಶಸ್ತಿ,

ಶ್ರೀ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಅತ್ಯುತ್ತಮ ಸಂಭಾಷಣೆ, ‘ಓಲ್ಡ್ ಮಾಂಕ್’ ಚಿತ್ರಕ್ಕಾಗಿ – ಖ್ಯಾತ ಚಿತ್ರಸಾಹಿತಿ ಶ್ರೀ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, (ಡಾ.ಎಚ್.ಕೆ. ನರಹರಿ ಅವರಿಂದ).

ಶ್ರೀ ಕಿರಣ್ ರಾಜ್ (‘777 ಚಾರ್ಲಿ’) ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ – ಹಿರಿತೆರೆ-ಕಿರುತೆರೆ ನಿರ್ದೇಶಕ ಶ್ರೀ ಬಿ. ಸುರೇಶ ಪ್ರಶಸ್ತಿ.

ಶ್ರೀ ಪ್ರಮೋದ್ ಮರವಂತೆ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’ ಗೀತರಚನೆಗಾಗಿ – ಹಿರಿಯ ಪತ್ರಕರ್ತರಾದ ಶ್ರೀ.ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ (ಶ್ರೀ ವಿನಾಯಕರಾಮ್ ಕಲಗಾರು ಅವರಿಂದ).

ಶ್ರೀ ಶ್ರೀನಿವಾಸಮೂರ್ತಿ ಹಿರಿಯ ಪೋಷಕ ಕಲಾವಿದರು – ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ (ಶ್ರೀಮತಿ ನಾಗಮಣಿ ಸೀತಾರಾಮ ಕುಟುಂಬದವರಿಂದ).

Sri Raghavendra Chitravani Prashasti – Awardees list for 2021 and 2022

Be the first to comment

Leave a Reply

Your email address will not be published. Required fields are marked *

Translate »
error: Content is protected !!