ಮದಗಜ ಟೈಟಲ್ ಸಾಂಗ್ ವಿಡಿಯೋ ರಿಲೀಸ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರದ ಟೈಟಲ್ ಸಾಂಗ್ ವಿಡಿಯೋ ಟ್ರ್ಯಾಕ್ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ. ವಿಡಿಯೋ ಸಾಂಗ್ ಬಿಡುಗಡೆ ಆದ 3 ಗಂಟೆಯಲ್ಲಿ 3.4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡುವ ಮೂಲಕ ಬೆನ್ನು ತಟ್ಟಿದ್ದಾರೆ. ಚಿತ್ರ ಡಿಸೆಂಬರ್ 3 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದ್ದು, ಬಿಡುಗಡೆಗೆ ಚಿತ್ರ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ತೆಲುಗು ಹಾಗೂ ತಮಿಳು ಭಾಷೆಯ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಚಿತ್ರ ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಮೂಡಿಸಿದೆ. ಚಿತ್ರ ಬಿಡುಗಡೆಗೆ ಬಹುತೇಕ ಸಿದ್ಧತೆ ಮುಗಿದಿದೆ.

ಈ ಸಿನಿಮಾ ಉಮಾಪತಿ ಫಿಲಂಸ್ ನಲ್ಲಿ ನಿರ್ಮಾಣ ಆಗಿದೆ. ಚಿತ್ರದಲ್ಲಿ ನಟ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಶಿಕಾ ಶ್ರೀಮುರಳಿ ಜೊತೆ ನಟಿಸುತ್ತಿದ್ದು, ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲ ಪೋಸ್ಟರ್ ನಲ್ಲಿ ಆಶಿಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮಾಸ್ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದರು.

ಮದಗಜ ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ವಿಲನ್ ಆಗಿ ಹೆಸರು ಮಾಡಿರುವ ಜಗಪತಿ ಬಾಬು ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ಇಮೇಜ್ ಹೆಚ್ಚಿಸಿದೆ.

ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!