ಸ್ಟಾರ್ ನಟಿ ಶ್ರೀಲೀಲಾ ಮುಂಬೈನ ಡಿವೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯ ಪದವಿ ಸ್ವೀಕರಿಸಿದ್ದಾರೆ.
ಬಹುಭಾಷಾ ಸಿನಿಮಾ, ನೃತ್ಯ ಕಾರ್ಯಕ್ರಮಗಳ ಬ್ಯುಸಿ ಶೆಡ್ಯೂಲ್ ನಡುವೆ ಶ್ರೀಲೀಲಾ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಬಳಿಕ ಶ್ರೀಲೀಲಾ ವೈದ್ಯೆ ಪಟ್ಟಕ್ಕೇರಿದ್ದಾರೆ.
ಪದವಿ ವಿತರಣಾ ಸಮಾರಂಭದ ವೇಳೆ ವೈದ್ಯರ ಪ್ರತಿಜ್ಞೆ ಸ್ವೀಕರಿಸುವ ದೃಶ್ಯಗಳು, ‘ನೀವುಗಳು ಈಗ ಅಧಿಕೃತವಾಗಿ ವೈದ್ಯರು’ ಎಂಬ ಘೋಷಣೆ ಕೇಳುತ್ತಿದ್ದಂತೆ ಖುಷಿಯಿಂದ ನಗುತ್ತಿರುವ ಶ್ರೀಲೀಲಾ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಾಲ್ಯದಿಂದ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದ ಶ್ರೀಲೀಲಾ, ಕನ್ನಡ ಸಿನಿಮಾಗಳಿಂದ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿ ಟಾಪ್ ಬೇಡಿಕೆಯ ನಟಿಯಾದರು. ತಮಿಳು ಚಿತ್ರರಂಗದಲ್ಲೂ ಭಾರೀ ಬೇಡಿಕೆ ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಅವರು ಒಟ್ಟಿಗೆ ಮೂರು-ನಾಲ್ಕು ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ.
ತೆಲುಗಿನಲ್ಲಿ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’, ಹಿಂದಿಯಲ್ಲಿ ‘ಆಶಿಖಿ 3’ ಮತ್ತು ರಣ್ವೀರ್ ಸಿಂಗ್ ಜೊತೆಗೆ ಹೊಸ ಸಿನಿಮಾ, ತಮಿಳಿನಲ್ಲಿ ಧನುಶ್ ಹಾಗೂ ಪ್ರದೀಪ್ ರಂಗನಾಥನ್ ಸಿನಿಮಾಗಳು ಅವರ ಕೈಯಲ್ಲಿವೆ.
—-





Be the first to comment