ಚಿತ್ರ: ಸ್ಫೂಕಿ ಕಾಲೇಜ್
ನಿರ್ದೇಶನ : ಭರತ್ ಜಿ
ನಿರ್ಮಾಣ : ಪ್ರಕಾಶ್
ತಾರಾಗಣ : ವಿವೇಕ್ ಸಿಂಹ, ಖುಷಿ ರವಿ, ಶ್ರೀಧರ್, ವಿಜಯ್ ಚೆಂಡೂರು, ರಘು ರಮಣಕೊಪ್ಪ ಇತರರು.
ರೇಟಿಂಗ್: 3/5
ಸ್ಫೂಕಿ ಕಾಲೇಜು ದೆವ್ವ, ಪ್ರೇತ ಹಾಗೂ ಆತ್ಮಗಳ ಕಥೆ ಹೊಂದಿದ ಚಿತ್ರ. ಆತ್ಮದ ಆಟ, ವಿದ್ಯಾರ್ಥಿಗಳ ಪರದಾಟ ಈ ಬಗೆಯ ಕಥಾವಸ್ತು ಮೂಲಕ ಗಮನ ಸೆಳೆಯಲು ಸ್ಫೂಕಿ ಕಾಲೇಜ್ ಯತ್ನಿಸುತ್ತದೆ.
ಇಡೀ ಸಿನಿಮಾ ನಡೆಯೋದು ಕಾಡು ಮಧ್ಯೆ ಇರುವ ಕಾಲೇಜಿನಲ್ಲಿ. ಕಾಲೇಜಿನಲ್ಲಿ ಏಕಾಏಕಿ ಶುರುವಾಗುವ ಆತ್ಮಗಳ ಆಟದ ಮೂಲಕ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ. ಮುಂದೆ ಇದರ ಹಾರರ್ ಸ್ಟೋರಿಗೆ ಲವ್‌ಸ್ಟೋರಿಯೂ ಕೂಡಾ ಸೇರಿಕೊಳ್ಳುತ್ತದೆ.
ಕಾಲೇಜಿನಲ್ಲಿ ದೆವ್ವ ಇರೋದು ನಿಜಾನಾ, ಸುಳ್ಳಾ? “ದೆವ್ವ ಹಿನ್ನೆಲೆ’ ಏನು … ಹೀಗೆ ಹಲವು ಕುತೂಹಲಗಳನ್ನು ಆಗಾಗ ಪ್ರೇಕ್ಷಕರಲ್ಲಿ ಮೂಡಿಸುತ್ತಾ ಸಾಗುವ ಚಿತ್ರದ ಬಗ್ಗೆ ತಿಳಿಯಲು ಥಿಯೇಟರ್ ಕಡೆಗೆ ಸಾಗಬೇಕು.
ಕಾಲೇಜಿನಲ್ಲಿ ಲವರ್ಸ್ ಮಾತ್ರ ಯಾಕೆ ಸಾಯುತ್ತಾರೆ? ಈ ಪ್ರೇಮಿಗಳ ಸಾವಿಗೂ ಬ್ರಿಟಿಷರ ಕಾಲದಲ್ಲಿ ಇದ್ದ ಅಧಿಕಾರಿಯ ಸಾವಿಗೂ, ಈಗ ಬಂದಿರುವ ನಾಯಕಿ ಜೀವನದಲ್ಲಾದ ದುರಂತಕ್ಕೂ ಇರುವ ಸಂಬಂಧ ತಿಳಿಯಲು ಚಿತ್ರ ನೋಡಬೇಕು.
ನಿರ್ದೇಶಕರು ಹಲವು ಸನ್ನಿವೇಶಗಳ ಮೂಲಕ “ಹಾರರ್’ ಫೀಲ್ ಕೊಡಲು ಪ್ರಯತ್ನಿಸಿದ್ದಾರೆ. ನಾಯಕಿ ಖುಷಿ ರವಿ, ನಾಯಕ ವಿವೇಕ್ ಸಿಂಹ, ಹನುಮಂತೇಗೌಡ, ಶ್ರೀಧರ್ ಪಾತ್ರಗಳು ಗಮನ ಸೆಳೆಯುತ್ತವೆ. ಚಿತ್ರದ ಹಿನ್ನೆಲೆ ಸಂಗೀತ “ಹಾರರ್’ ಫೀಲ್ ಹೆಚ್ಚಿಸುವಲ್ಲಿ ಯಶಸ್ವಿ ಆಗಿದೆ.
______


Be the first to comment