ಬಹು ನಿರೀಕ್ಷಿತ ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದ ಮುಹೂರ್ತ ಸಮಾರಂಭದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಮುಹೂರ್ತ ಸಮಾರಂಭದ ಚಿತ್ರಗಳನ್ನು ನಿರ್ಮಾಣ ಬ್ಯಾನರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಕಾರ್ಯಕ್ರಮಕ್ಕೆ ಪ್ರಭಾಸ್ ಗೈರಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ, ನಾಯಕಿಯಾಗಿ ನಟಿಸಲಿರುವ ತೃಪ್ತಿ ದಿಮ್ರಿ ಮತ್ತು ಪ್ರಣಯ್ ರೆಡ್ಡಿ ವಂಗಾ, ಕೃಷನ್ ಕುಮಾರ್, ಪ್ರಭಾಕರ್ ರೆಡ್ಡಿ ವಂಗಾ ಅವರೊಂದಿಗೆ ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಭಾಗವಹಿಸಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಅವರು ಸ್ಕ್ರಿಪ್ಟ್ ಬರಹಗಾರರಾಗಿ ಕೆಲಸ ಮಾಡುವುದರ ಜೊತೆಗೆ, ಸಂಕಲನಕಾರರೂ ಆಗಿದ್ದಾರೆ. ಛಾಯಾಗ್ರಾಹಕರಾಗಿ ರಾಜ್ ತೋಟಾ, ನಿರ್ಮಾಣ ವಿನ್ಯಾಸಕರಾಗಿ ಸುರೇಶ್ ಸೆಲ್ವರಾಜನ್ ಇದ್ದಾರೆ. ಸುಪ್ರೀಂ ಸುಂದರ್ ಆ್ಯಕ್ಷನ್ ಕೊರಿಯೋಗ್ರಫಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ‘ಸ್ಪಿರಿಟ್’ ಚಿತ್ರದ ಚಿತ್ರೀಕರಣ ನವೆಂಬರ್ನಲ್ಲಿ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದ್ದರು. ವಾರಗಳ ಹಿಂದೆ ಬಿಡುಗಡೆಯಾದ ಸ್ಪಿರಿಟ್ ಚಿತ್ರದ ಮೊದಲ ಆಡಿಯೋ ಟೀಸರ್, ನಾಯಕ ಪ್ರಭಾಸ್ ಅವರ ಪರಿಚಯದೊಂದಿಗೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿತು. ಟೀಸರ್ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವ ಪ್ರಕಾಶ್ ರಾಜ್ ಮತ್ತು ವಿವೇಕ್ ಒಬೆರಾಯ್ ಅವರ ಧ್ವನಿಗಳು ಇದ್ದವು.
ಈ ಯೋಜನೆಗೆ ಅನಿಮಲ್ ಚಿತ್ರದ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಮೇಶ್ವರ್ ಸಾಥ್ ನೀಡುತ್ತಿದ್ದಾರೆ.
—-





Be the first to comment