‘ಸ್ಪಿರಿಟ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಸಂದೀಪ್ ರೆಡ್ಡಿ ನಿರ್ದೇಶನದ ಮುಂಬರುವ ಚಿತ್ರ ‘ಸ್ಪಿರಿಟ್’ ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. 

‘ಸ್ಪಿರಿಟ್’ನ ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್‌ನಲ್ಲಿ ಪ್ರಭಾಸ್ ಉದ್ದ ಕೂದಲು, ಗಡ್ಡ ಮತ್ತು ಮೀಸೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಪ್ರಭಾಸ್  ಶರ್ಟ್ ಇಲ್ಲದೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಾಯಕನ ಬೆನ್ನಿನ ಮೇಲೆ ಹಲವಾರು ಗಾಯಗಳು ಮತ್ತು ಬ್ಯಾಂಡೇಜ್‌ಗಳು ಕಾಣಿಸಿಕೊಂಡಿದೆ.

ಪ್ರಭಾಸ್ ಬಿಳಿ ಪ್ಯಾಂಟ್ ಧರಿಸಿ, ಒಂದು ಕೈಯಲ್ಲಿ ಸಿಗರೇಟ್ ಮತ್ತು ಇನ್ನೊಂದು ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡಿದ್ದಾರೆ. ಪಕ್ಕದಲ್ಲೇ ಸೀರೆಯುಟ್ಟ ತೃಪ್ತಿ ದಿಮ್ರಿ ಪ್ರಭಾಸ್ ಸಿಗರೇಟಿಗೆ ಬೆಂಕಿ ಹಚ್ಚುತ್ತಿದ್ದಾರೆ.

ರಣಬೀರ್ ಕಪೂರ್ ಅವರ ‘ಅನಿಮಲ್’,  ಶಾಹಿದ್ ಕಪೂರ್ ಅವರ ‘ಕಬೀರ್ ಸಿಂಗ್’ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಸಂದೀಪ್ ರೆಡ್ಡಿ ಅವರ  ಚಿತ್ರ ಸ್ಪಿರಿಟ್ ನಲ್ಲಿ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಜೊತೆಗೆ ವಿವೇಕ್ ಒಬೆರಾಯ್, ಕಾಂಚನಾ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ.  ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಆದರೆ ತ್ರಿಪ್ತಿ ದಿಮ್ರಿ ಅವರ ಪ್ರೇಯಸಿಯಾಗಿ ನಟಿಸಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!