ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ನಟ ಸುದೀಪ್ ಅವರ ಸಾಧನೆಯನ್ನು ಗಮನಿಸಿ ವಿಶೇಷ ಅಂಚೆ ಲಕೋಟೆ ಹೊರ ತರಲು ಅಂಚೆ ಇಲಾಖೆ ಮುಂದಾಗಿದೆ.
ವ್ಯಕ್ತಿಗಳ ಸಾಧನೆಗಳನ್ನು ದಾಖಲೆ ಮಾಡಬೇಕೆಂಬ ಕಾರಣಕ್ಕೆ ‘ವಿಶೇಷ ಅಂಚೆ ಲಕೋಟೆಯನ್ನು’ ಬಿಡುಗಡೆ ಮಾಡಲಾಗುತ್ತದೆ.
ಅಂಚೆ ಇಲಾಖೆಯ ಅಧೀಕ್ಷರಾದ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ ಈ ಬಗ್ಗೆ NOC ಪಡೆದರು. ವಿಶೇಷ ಲಕೋಟೆ ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸುದೀಪ್ ಅವರನ್ನು ಆಹ್ವಾನಿಸಿದರು.
ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ. ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ ‘ವಿಶೇಷ ಅಂಚೆ ಲಕೋಟೆ’ ಮೂಲಕ ಗೌರವ ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆದ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಹಿಟ್ ಎನಿಸಿದೆ.
___

Be the first to comment