ಆಸ್ಕರ್ ಪ್ರಶಸ್ತಿಯ ಕಮಿಟಿಯಲ್ಲಿ ಸದಸ್ಯತ್ವ ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಸೂರ್ಯ ಅವರು ಆಸ್ಕರ್ ಸ್ಪರ್ಧೆಗೆ ತಮ್ಮ ಮತ ಚಲಾಯಿಸಿದ್ದಾರೆ.
ಆಸ್ಕರ್ ಸ್ಪರ್ಧೆಗೆ ವೋಟ್ ಮಾಡಿರುವ ವಿಷಯವನ್ನು ಟ್ವಿಟರ್ ಮೂಲಕ ಸೂರ್ಯ ಅವರು ಖಚಿತಪಡಿಸಿದ್ದಾರೆ.
ಸೂರ್ಯ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆಯಂಡ್ ಸೈನ್ಸಸ್’ ಸದಸ್ಯತ್ವ ನೀಡಲಾಗಿದೆ. ಈ ಬಾರಿ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಸ್ಪರ್ಧೆಯಲ್ಲಿದೆ. ಆ ಕಾರಣದಿಂದ ಆಸ್ಕರ್ ಪ್ರಶಸ್ತಿ ಹೆಚ್ಚು ನಿರೀಕ್ಷೆ ಮೂಡಿಸಿದೆ.
95ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ. ಈ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು.
ಮಾರ್ಚ್ 13ರಂದು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ 95ನೇ ಸಾಲಿನ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಭಾರತದ ಸಿನಿಮಾಗಳು 3 ವಿಭಾಗದಲ್ಲಿ ನಾಮಿನೇಟ್ ಆಗಿರುವುದರಿಂದ ಆಸ್ಕರ್ ಪ್ರಶಸ್ತಿ ಬಗ್ಗೆ ಹೆಚ್ಚಿನ ಕುತೂಹಲ ಉಂಟಾಗಿದೆ.
__
Be the first to comment