ವಿಭಿನ್ನ ಕಥಾಹಂದರ ಹೊಂದಿರುವ ‘ಸೂಜಿದಾರ’ ಚಿತ್ರದಲ್ಲಿ ಹಲವು ವಿಶೇಷತೆಗಳು ಇರಲಿದೆ. ನಾಯಕ ಯಶ್ವಂತ್ಶೆಟ್ಟಿ, ಸಂಗೀತ ನಿರ್ದೇಶಕ ಶ್ರೀಧರ್ಹೆಗ್ಗೋಡು-ದಿಗ್ವ್ವಿಜಯಹೆಗ್ಗೋಡು, ಚೊಚ್ಚಲಬಾರಿ ಆಕ್ಷನ್ ಕಟ್ ಹೇಳಿರುವ ಮೌನೇಶ್ಬಡಿಗೇರ್, ಅತಿಥಿಗಳಾಗಿ ಆಗಮಿಸಿದ್ದ ನಟ ನೀನಾಸಂಸತೀಶ್, ನಿರ್ದೇಶಕ ಬಿ.ಎಂ.ಗಿರಿರಾಜ್ ಎಲ್ಲರೂ ನೀನಾಸಂ ರಂಗಶಾಲೆಯಿಂದ ಗುರುತಿಸಿಕೊಂಡವರಾಗಿದ್ದಾರೆ. ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಿದ ನೀನಾಸಂ ಸತೀಶ್ ಮಾತನಾಡಿ ಚಿತ್ರ ನೋಡಿದ್ದೇನೆ. ಚೆನ್ನಾಗಿದೆ. ನಿರ್ದೇಶಕರೊಂದಿಗೆ ಹದಿನಾರು ವರ್ಷದ ಸ್ನೇಹವಿದೆ. ನಾನೇ ವಿತರಣೆ ಮಾಡಬೇಕಿತ್ತು. ಚಂಬಲ್, ಬ್ರಹ್ಮಚಾರಿ ಚಿತ್ರದಲ್ಲಿ ಬ್ಯುಸಿ ಇದ್ದ ಕಾರಣ ತೆಗೆದುಕೊಳ್ಳಲಾಗಲಿಲ್ಲ. ಯಶ್ವಂತ್ಶೆಟ್ಟಿ ಎನ್ಎಸ್ಟಿಯಿಂದ ಬಂದವರಾಗಿದ್ದಾರೆ. ಇಂತಹ ಕಲಾವಿದರು ಚಿತ್ರರಂಗಕ್ಕೆ ಬರಬೇಕು. ನಾಯಕನಾಗಿ ಅವಕಾಶ ಪಡೆಯುವುದು ಅಷ್ಟು ಸುಲಭವಲ್ಲ. ನನಗೂ ಅನುಭವ ಆಗಿದೆ. 2003ರಲ್ಲಿ ನೀನಾಸಂ ಸೇರಿದಾಗ ಶ್ರೀಧರ್ಹೆಗ್ಗೋಡು ಪ್ರಾದ್ಯಾಪಕರಾಗಿ ನನ್ನಂತ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಇಂದು ಅವರ ಆರೋಗ್ಯ ಕುಂಠಿತವಾಗಿರುವುದು ಬೇಸರ ತರಿಸಿದೆ. ಆದರೂ ಅದ್ಬುತ ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆಂದು ಅವರನ್ನು ನೋಡುತ್ತಾ ಭಾವುಕರಾದರು.
ಸಂಕೀರ್ಣ ಆಯಾಮಗಳನ್ನು ಸೇರಿಸಿಕೊಂಡು ಚಿತ್ರ ಮಾಡಲಾಗಿದೆ. ಸಮಾಜದ ಸುತ್ತ ಹಲವರು ನಾನಾ ರೀತಿಯ ಬವಣೆಗಳನ್ನು ಅನುಭವಿಸುತ್ತಿದ್ದಾರೆ. ಅಂತಹುದೆ ಕೆಲವು ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ನಾಯಕಿ ಹರಿಪ್ರಿಯಾ ಇಲ್ಲಿಯವರೆಗೂ ನೋಡದ, ನಟಿಸದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೆನಿದ್ದರೂ ಜನರು ಸಹಕಾರ ನೀಡಬೇಕೆಂದು ಮಾದ್ಯಮದ ಮೂಲಕ ವಿನ್ಯಾಸ, ನಿರ್ದೇಶನ ಮಾಡಿರುವ ಮೌನೇಶ್ಬಡಿಗೇರ್ ಕೋರಿಕೊಂಡರು.ಖಳನಟನಾಗಿ ಖುಷಿಯಾಗಿದ್ದು, ನಾಯಕನಾಗಿ ಬರುವುದು ಬೇಡವೆಂದು ತೀರ್ಮಾನಿಸಿದ್ದೆ. ಕತೆ ಕೇಳಿ ಇಲ್ಲ ಎನ್ನಲು ಅಗಲಿಲ್ಲ. ನೀನಾಸಂ ಸೇರಿದಾಗ ಎಲ್ಲರೂ ಶ್ರೀಧರ್ ಸರ್ ಬಗ್ಗೆ ಹೇಳುತ್ತಿದ್ದರು. ಅವರೊಂದಿಗೆ ಕಲಿಯುವ ಯೋಗ ಇಲ್ಲವೆಂದು ಸುಮ್ಮನಾಗಿದ್ದೆ. ನಾಯಕನಾಗಿರುವ ಪ್ರಥಮ ಚಿತ್ರಕ್ಕೆ ಅವರದೇ ಸಂಗೀತ ಇರುವುದು ನನ್ನ ಪಾಲಿನ ಸುದೈವ ಎನ್ನಬಹುದು. ಸಣ್ಣ ಮನೆಯಲ್ಲಿ ನಾಲ್ಕು ಗೋಡೆಗಳ ಮದ್ಯೆ ಸೆರೆಹಿಡಿದಿರುವ ಛಾಯಾಗ್ರಾಹಕರ ಕೆಲಸ ಸೂಪರ್ ಆಗಿದೆ ಎಂದು ಯಶ್ವಂತ್ಶೆಟ್ಟಿ ಸಂತಸಗೊಂಡರು.
ಸಂಗೀತ ನಿರ್ದೇಶಕರು, ಹಿನ್ನಲೆ ಶಬ್ದ ಒದಗಿಸಿರುವ ಪ್ರದೀಪ್ವರ್ಮ, ವಿತರಕ ವೆಂಕಟ್, ಛಾಯಾಗ್ರಾಹಕ ಅಶೋಕ್.ವಿ.ರಾಮನ್, ಸಾಹಿತಿ ವಿಕ್ರಂಹತ್ವಾರ್, ಸಂಭಾಷಣೆಗೆ ಪದಗಳನ್ನು ಜೋಡಿಸುವ ಜೊತೆಗೆ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಚೈತ್ರಾಕೋಟೂರ್, ನಿರ್ಮಾಪಕರುಗಳಾದ ಉಡುಪಿಯ ಅಭಿಜಿತ್ಕೋಟೆಗಾರ್- ಬೆಳ್ತಂಗಡಿ ಮೂಲದ ಸಚ್ಚೀಂದ್ರನಾಥ್ ನಾಯಕ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ನಾಯಕಿ ಹರಿಪ್ರಿಯಾ ಗೈರುಹಾಜರಿಗೆ ನಿರ್ಮಾಪಕರ ಬೇಸರ ಅವರ ಆನನದಲ್ಲಿ ಎದ್ದು ಕಾಣುತ್ತಿತ್ತು. ಅಂದಹಾಗೆ ಚಿತ್ರವು ಮುಂದಿನ ತಿಂಗಳು 10ರಂದು ತೆರೆಕಾಣಲಿದೆ.
Be the first to comment