‘ಕಮರ್ಶಿಯಲ್ ಟಚ್’ ಹೆಸರಿನಲ್ಲಿ ಮೊಂಡಾಯ್ತಾ ‘ಸೂಜಿ’!

ತನ್ನ ಬದುಕಿನಲ್ಲಿ ಸಂಭವಿಸಿದ ಒಂದು ಅಘಾತಕಾರಿ ಘಟನೆಯಿಂದಾಗಿ ವ್ಯಕ್ತಿಯೊಬ್ಬ ಓಡಲು ಆರಂಭಿಸಿ, ಕೊನೆಗೆ ಕೌಟಂಬಿಕ ಹಿಂಸೆಗೆ ಒಳಗಾದ ಮಹಿಳೆಯೊಬ್ಬಳ ಬಳಿ ಸೇರುತ್ತಾನೆ. ಇಬ್ಬರೂ ಅಪರಿಚಿತರಾಗಿದ್ದರೂ ಬದುಕಿನ ಯಾವುದೋ ಒಂದು ತಿರುವು ಅವರಿಬ್ಬರ ನಡುವಿನ ಕೊಂಡಿಯಾಗಿರುವ ಸೋಜಿಗವನ್ನು `ಸೂಜಿದಾರ’ ಕೊನೆಯಲಲ್ಲಿ ಬಿಚ್ಚಿಡುತ್ತದಾ? ಅನ್ನುವ ಪ್ರಶ್ನೆಯೊಂದಿಗೇ ಇಡೀ ಚಿತ್ರ ಸಾಗುತ್ತದೆ.
‘ಸೂಜಿದಾರ’ದ ಕಥೆಯನ್ನು ನಿರ್ದೇಶಕ ಮೌನೇಶ್ ಬಡಿಗೇರ್ `ರಾಮಾಯಣ’ದೊಂದಿಗೆ ಹೊಲಿಯುವ ಪ್ರಯತ್ನವನ್ನು ಮಾಡುವುದರ ಜೊತೆಗೆ, ಈ ಪ್ರಯತ್ನದ ಸಾರ್ಥಕತೆಗಾಗಿ ಹಲವು ಪಾತ್ರಗಳನ್ನು ಅನ್ಯಾಥಾ ಎಳೆದು ತರುವ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾಮಿಡಿ ಇರಲೇಬೇಕೆಂದು ಹಲವು ದೃಶ್ಯಗಳು ಚಿತ್ರಕ್ಕೆ ಅಗತ್ಯವಿಲ್ಲವೆಂದಾದರೂ ತುರುಕುದಂತಿದೆ. ಇನ್ನು, ಟೀವಿಯಲ್ಲಿ ಬರೋ ನ್ಯೂಸ್ ಹಲವು ದೃಶ್ಯಗಳಲ್ಲಿ ಅದೇ ಆಗಿರುತ್ತದೆ. ಮೋಸ್ಟಲೀ ಸಿ.ಜಿಯ ವೆಚ್ಚವನ್ನು ಉಳಿಸುವ ಐಡಿಯಾ ಇರಬೇಕು. ಎಫೆಕ್ಟ್ ಕೆಲಸ ಮಾಡಿದ ಮಹಾನುಭಾವ ಹಲವು ಕಡೆ ಎಫೆಕ್ಟ್ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾನೆ. ಪಾತ್ರವೊಂದು `ಜಡಿಮಳೆ’ ಅಂತ ಹೇಳುತ್ತಿದ್ದರೂ ,ಮಳೆ ಧೋ ಎಂದು ಸುರಿಯುತ್ತಿದ್ದರೂ ಮಳೆಯ ಸದ್ದಿಲ್ಲ!

ಒಂದು ಉತ್ತಮ ಪ್ಲಾಟ್ ಅನ್ನು ಆರಿಸಿಕೊಂಡಿದ್ದ ಬಡಿಗೇರ್ ನರೇಶನ್ ಮೂಲಕ ಸೋಲುತ್ತಾರೆ. ಹಲವು ಪಾತ್ರಗಳು ಬೋರ್ ಹೊಡೆಸುತ್ತವೆ. ಅಪರೂಪಕ್ಕೆ ಸುಚೇಂದ್ರ ಪ್ರಸಾದ್ ಆಡು ಭಾಷೆಯಲ್ಲಿ ಮಾತನಾಡಿ ಖುಷಿ ಕೊಡುತ್ತಾರೆ. ನಟ ಅಚ್ಯುತ್‍ಕುಮಾರ್ ಉತ್ತಮ ಪಾತ್ರಕ್ಕಾಗಿ ಚಿತ್ರ ಮಾಡುವುದನ್ನು ಬಿಟ್ಟಂತಿದೆ. ದುಡ್ಡುಕೊಟ್ಟರೆ ಎಂತಹ ಪಾತ್ರವನ್ನೂ ಅಚ್ಯುತ್ ಮಾಡಬಲ್ಲರು ಅನ್ನುವುದಕ್ಕೆ ಸೂಜಿದಾರ ನೋಡಬೇಕು. ಇನ್ನು ಬಡಿಗೇರ್ ಚಿತ್ರಕಥೆಯಲ್ಲಿ ತಂದಿರುವ `ಪದ್ಮಶ್ರೀ’ ಎಪಿಸೋಡ್ ಜಸ್ಟ್ ಇರಿಟೇಟಿಂಗ್. ಒಂದು ಅಪರೂಪದ ಕಥೆಗೆ ಕಮರ್ಶಿಯಲ್ ಟಚ್ ಕೊಡಲು ಹೋದ ನಿರ್ದೇಶಕರು ಚಿತ್ರಕ್ಕೊಂದು ಚೌಕಟ್ಟು ಕಟ್ಟಿಕೊಡುವಲ್ಲಿ ಸೋತಿದ್ದಾರೆ. ‘ಕಮರ್ಶಿಯಲ್ ಟಚ್’ ಹೆಸರಿನಲ್ಲಿ ಜನ್ಮಪಡೆದ ಪಾತ್ರಗಳು ಯಶ್ವಂತ್ ಶೆಟ್ಟಿ ಮತ್ತು ಹರಿಪ್ರಿಯಾ ಅವರ ಪಾತ್ರಗಳಿಗಿರುವ ಸೀರಿಯೆಸ್ ಪರ್‍ಫಾಮೆನ್ಸ್‍ಗಳ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ.

ಇಡೀ ಚಿತ್ರದಲ್ಲಿ ಒಂದು ಸಣ್ಣ ಮನೆಯೊಳಗೇ ಕಳೆಯುವ ಹರಿಪ್ರಿಯಾರಿಗೆ ಇಲ್ಲಿ ಹೆಚ್ಚು ಕೆಲಸ ಇಲ್ಲ. ಕಲವೇ ದಿನಗಳ ಕಾಲ್‍ಶೀಟ್‍ನಲ್ಲಿ ಹರಿಪ್ರಿಯ ಚಿತ್ರ ಮುಗಿಸಿರುವುದು ಅವರ ಪರ್‍ಫಾಮೆನ್ಸ್ ಚಿತ್ರದಲ್ಲಿ ನೋಡಿದರೆ ಅಂದಾಜಾಗುತ್ತದೆ. ಇನ್ನು, ನಿನಾಸಂ ಪ್ರತಿಭೆ ಯಶ್ವಂತ್ ಶೆಟ್ಟಿ ಪಾತ್ರಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿರೋದು ಎದ್ದು ಕಾಣುತ್ತದೆ. `ಸೂಜಿದಾರ’ದಂತಹ ಅಸಾಧಾರಣ ಕಥೆಗೆ ಯಶ್ವಂತ್ ಬೆಸ್ಟ್ ಚಾಯ್ಸ್.
ಒಟ್ಟಿನಲ್ಲಿ `ಸೂಜಿದಾರ’ ಒಂದು ಸಲ ನೋಡಬಹುದಾದ ಸಿನ್ಮಾ. ನೋಡಲೇ ಬೇಕಾದ ಸಿನ್ಮಾ ಖಂಡಿತಾ ಅಲ್ಲ!.

-www.bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!