ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ

ನಟಿ ಸೋನಿಯಾ ಬನ್ಸಾಲ್ ಅವರು ಚಿತ್ರರಂಗ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

‘ನಾಟಿ ಗ್ಯಾಂಗ್’ ಸಿನಿಮಾದಿಂದ  ವೃತ್ತಿಜೀವನವನ್ನು ಆರಂಭಿಸಿದ ಸೋನಿಯಾ ಬನ್ಸಾಲ್ ಅವರು  ಜೀವನ ತರಬೇತುದಾರ ಆಗಿ   ಮತ್ತು ಆಧ್ಯಾತ್ಮಿಕ ಚಿಕಿತ್ಸೆ ನೀಡಲು ಬಯಸುತ್ತೇನೆ ಎಂದಿದ್ದಾರೆ.

ತಮ್ಮ ಆಘಾತಕಾರಿ ನಿರ್ಧಾರದ ಬಗ್ಗೆ ಮಾತನಾಡಿರುವ ಸೋನಿಯಾ ಬನ್ಸಾಲ್, ಕೆಲಸ ಮತ್ತು ಹಣ ಇದ್ದರೂ, ತನ್ನ ಜೀವನದಲ್ಲಿ ಶಾಂತಿಯ ಕೊರತೆ ಇತ್ತು.  ಹೆಚ್ಚು ಸಂಪಾದನೆ, ಯಶಸ್ಸು, ಖ್ಯಾತಿಯ ಹಿಂದೆ ಓಡುತ್ತಾ ನಾನು ನನ್ನನ್ನು ಕಳೆದುಕೊಂಡೆ. ನನ್ನ ಬಳಿ ಹಣವಿತ್ತು, ಜನಪ್ರಿಯತೆಯೂ ಇತ್ತು. ಆದರೆ  ಶಾಂತಿಯಿಂದ ಇರದಿದ್ದರೆ, ಬಾಕಿ  ಎಲ್ಲ ಇದ್ದರೂ ಏನು ಉಪಯೋಗ? ಬಾಹ್ಯವಾಗಿ ಎಲ್ಲವೂ ಇದ್ದರೂ, ಒಳಗಿನಿಂದ ಖಾಲಿಯಾಗಿ ಹೋದರೆ ಅದು ತುಂಬಾ ಕತ್ತಲೆಯ ಅನುಭವ. ನಾವು ಬಹುಶಃ ಇತರರಿಗಾಗಿಯೇ ಎಲ್ಲವನ್ನೂ ಮಾಡುತ್ತೇವೆ. ಆದರೆ ಅದರಲ್ಲಿ ನಮ್ಮನ್ನು ನಾವು ಮರೆತು ಬಿಡುತ್ತೇವೆ  ಎಂದಿದ್ದಾರೆ.

ಮನರಂಜನಾ ಕ್ಷೇತ್ರವು ನನಗೆ ಗುರುತನ್ನು ನೀಡಿತ್ತಾದರೂ ಅದು ನನಗೆ ಸ್ಥಿರತೆ ಅಥವಾ ಒಳಗಿನ ಸಂತೋಷವನ್ನು ನೀಡಲಿಲ್ಲ. ನಾನು ಇನ್ನು ಮುಂದೆ ನಟನೆ ಬಯಸುವುದಿಲ್ಲ ಎಂದಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!