ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಾನು ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದಾಗಿ ತಿಳಿಸಿ ಚಿತ್ರರಂಗವನ್ನು ದಿಗ್ಭ್ರಮೆ ಗೊಳಿಸಿದರು. ಪ್ರತಿಭಾವಂತ ಬೆಡಗಿ ಹಾಗೂ ಮೃದು ಸ್ವಭಾವದ ತಾರೆಗೆ ಕ್ಯಾನ್ಸರ್ ರೋಗ ಪತ್ತೆಯಾಗಿರುವುದಕ್ಕೆ ಬಿ-ಟೌನ್ ಮರುಗಿದೆ. ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತಿದ್ದ ಈ ನಟಿ ಈಗ ನ್ಯೂಯಾರ್ಕ್‍ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋನಾಲಿ ಝೀ ಟಿವಿಗಾಗಿ ಇಂಡಿಯಾಸ್ ಬೆಸ್ಟ್ ಡ್ರಾಮೇಬಾಝ್ ಸೀಸನ್-3 ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಬೇಕಿತ್ತು. ಆದರೆ ಅನಾರೋಗ್ಯದಿಂದಾಗಿ ಜಡ್ಜ್ ಆಗಲು ಸಾಧ್ಯವಾಗುತ್ತಿಲ್ಲ. ಶೋ ಮಸ್ಟ್ ಗೋ ಆನ್ ಎಂಬಂತೆ ಈ ರಿಯಾಲಿಟಿ ಶೋನಲ್ಲಿ ಸೋನಾಲಿ ಬದಲು ಬಾಲಿವುಡ್ ನಟಿ ಹ್ಯುಮ ಖುರೇಷಿ ತೀರ್ಪುಗಾರ್ತಿಯಾಗಲಿದ್ದಾಳೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಲ್ಲದೇ ಒಂದು ಎಪಿಸೋಡ್ ಶೂಟಿಂಗ್‍ನನ್ನೂ ಖುರೇಷಿ ಪೂರ್ಣಗೊಳಿಸಿದ್ದಾಳೆ. ನಟ ವಿವೇಕ್ ಓಬೇರಾಯ್ ಮತ್ತು ನಿರ್ದೇಶಕ ಓಮಂಗ್ ಕುಮಾರ್ ಈ ಶೋಗೆ ಜಡ್ಜ್‍ಗಳಾಗಿದ್ದಾರೆ.
ಮೋಹಕ ಬೆಡಗಿ ಸೋನಾಲಿಗೆ ಮಾರಕ ಕ್ಯಾನ್ಸರ್ ಆವರಿಸಿಕೊಂಡಿರುವುದರಿಂದ ಅಭಿಮಾನಿಗಳು ದುಃಖಿತರಾಗಿದ್ದಾರೆ. ತಮ್ಮ ಮೆಚ್ಚಿನ ನಟಿಯನ್ನು ಪ್ರತಿದಿನ ಟಿವಿಯಲ್ಲಿ ನೋಡಿ ಸಂತಸಪಡುವವರಿದ್ದರು. ಆದರೆ ಕ್ಯಾನ್ಸರ್ ಈ ಅವಕಾಶವನ್ನು ಕಸಿದುಕೊಂಡಿದೆ. ಈಗ ಸ್ಥಾನವನ್ನು ಹ್ಯುಮ ಖುರೇಷಿ ತುಂಬಲಿದ್ದಾಳೆ.
Be the first to comment