ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಂಥೆರೋ ಅವರ ಮದುವೆ ಆಗಸ್ಟ್ 10, 11ರಂದು ಜರುಗಲಿದೆ.
ತರುಣ್ ಸುಧೀರ್, ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಾಬರ್ಟ್ ಚಿತ್ರದ ಸೆಟ್ ಗಳಲ್ಲಿ ಪ್ರಾರಂಭವಾದ ಇವರಿಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಅರಳಿದೆ.
ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ತರುಣ್ ಅವರು ನಿಗದಿತ ದಿನಾಂಕಕ್ಕೆ ಹಸಿಮಣಿ ಯೇರಲಿದ್ದಾರೆ.
ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್ ನಲ್ಲಿ ನಡೆಯಲಿರೋ ವಿವಾಹ.
ಮದುವೆ ಬಗ್ಗೆಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾದ ಬಳಿಕ ತರುಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. “ಮದುವೆ ಡೇಟ್ ಚೇಂಜ್ ಮಾಡಬೇಡ. ಅಷ್ಟರೊಳಗೆ ಬರ್ತೀನಿ ಎನ್ನುವ ನಂಬಿಕೆ ಅವರಲ್ಲಿ ಇದೆ. ದರ್ಶನ್ ಏನೂ ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲೇ ನಾವು ಕೂಡ ಇದ್ದೇವೆ. ಹಾಗೆಯೇ ಆಗಲಿ ಅಂತ ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದರು.
‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್(ರಾಘವ) ಜೋಡಿ ತನು ಆಗಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಆಪ್ತರು ಹೇಳುತ್ತಿದ್ದಾರೆ. ನಟ ದರ್ಶನ್ ತರುಣ್ ಸುಧೀರ್‌ಗೆ ಮದುವೆ ಮಾಡಿಸಬೇಕು ಎಂದು ಹೇಳುತ್ತಿದ್ದರು. ಹಾಗಾಗಿ ಶೂಟಿಂಗ್ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನಲಾಗಿದೆ.
Be the first to comment