Sonal ರೋಲೆಕ್ಸ್ ಹೀರೋಯಿನ್ ಸೋನಲ್ ಮೊಂತೆರೋ

ಕೋಮಲ್ ಕುಮಾರ್ ಅವರ ಮುಂದಿನ ಸಿನಿಮಾ ರೋಲೆಕ್ಸ್ ನಲ್ಲಿ ಸೋನಲ್ ಮೊಂತೆರೋ ನಾಯಕಿಯಾಗಿ ನಟಿಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀನಿವಾಸ್, ಕಾಮಿಡಿ ಎಂಟರ್ಟೈನರ್ ಸಿನಿಮಾವು ಮಧ್ಯಮ ವರ್ಗದ ವ್ಯಕ್ತಿ ಮತ್ತು ಕೋಟ್ಯಾಧಿಪತಿಯ ನಡುವಿನ ಜುಗಲ್ಬಂದಿಯಾಗಿದೆ. ಸೋನಲ್ ಕೋಟ್ಯಾಧಿಪತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಚಿತ್ರದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ ಮತ್ತು ಶೋಭರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರೋಲೆಕ್ಸ್ ಸಿನಿಮಾಗೆ ಜಸ್ಸಿ ಗಿಫ್ಟ್ ಸಂಗೀತ, ರಾಕೇಶ್ ಸಿ ತಿಲಕ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

ಜನವರಿ 26 ರಂದು ಮುಹೂರ್ತದೊಂದಿಗೆ ಚಿತ್ರೀಕರಣವನ್ನು ಪ್ರಾರಂಭಿಸಲು ಚಿತ್ರತಂಡ ಯೋಜಿಸಿದೆ.

ರೋಲೆಕ್ಸ್ ಅಲ್ಲದೇ ಕೋಮಲ್ ಅವರು ಮುರಳಿಯವರ ನಮೋ ಭೂತಾತ್ಮ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸೋನಲ್ ಮೊಂತೆರೋ ಅವರು ಬುದ್ಧಿವಂತ 2, ಶುಗರ್ ಫ್ಯಾಕ್ಟರಿ ಮತ್ತು ಈಗಾಗಲೇ ಶೂಟಿಂಗ್ ಮುಗಿಸಿರುವ ಗರಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!