ಸೋನಲ್

ಸೋನಲ್ ಮದುವೆ ನಂತರದ ಮೊದಲ ಚಿತ್ರ ‘ರಾಕ್ಷಸ’ ಬಿಡುಗಡೆ

ಸೋನಲ್ ಮೊಂಥೆರೋ ಮದುವೆ ನಂತರದ ಮೊದಲ ಚಿತ್ರ ‘ರಾಕ್ಷಸ’ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ.

ಎಚ್. ಲೋಹಿತ್ ನಿರ್ದೇಶನದ ‘ಟೈಮ್ ಲೂಪ್’ ಕಾನ್ಸೆಪ್ಟ್ ನ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

ರಾಕ್ಷಸದಲ್ಲಿನ ತನ್ನ ಪಾತ್ರ ಕುರಿತು ಅನುಭವ ಹಂಚಿಕೊಂಡ ಸೋನಲ್, ಲೋಹಿತ್ ಅವರ ಟೈಮ್-ಲೂಪ್ ಪರಿಕಲ್ಪನೆ ಆಕರ್ಷಕವಾಗಿದ್ದು, ಪ್ರಜ್ವಲ್ ದೇವರಾಜ್ ಜೊತೆಗೆ ಕೆಲವು ಅದ್ಭುತವಾದ ಆಕ್ಷನ್ ಸೀಕ್ವೆನ್ಸ್‌ಗಳಿವೆ. ನನ್ನ ಪಾತ್ರ ಪ್ರಭಾವಶಾಲಿಯಾಗಿದೆ. ನನ್ನ ಪಾತ್ರವು ನೆರೆ ಮನೆಯ ವಿವಾಹಿತ ಮಹಿಳೆಗೆ ಹೋಲುತ್ತದೆ. 10 ಮಹಿಳೆಯರಲ್ಲಿ 6 ಮಂದಿ ಈ ಪಾತ್ರದಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ. ಮದುವೆಯ ನಂತರ ಆ ಭಾಗಗಳನ್ನು ಚಿತ್ರೀಕರಿಸುವುದು ಎಕ್ಸೈಟ್ ಆಗಿದೆ ಎಂದಿದ್ದಾರೆ.

ಪಾತ್ರನನ್ನು ನನ್ನನ್ನು ಸೆಳೆಯಿತು. ಲೋಹಿತ್ ಅವರ ಹಿಂದಿನ ಚಿತ್ರಗಳಲ್ಲಿ ವಿಶಿಷ್ಟ ಪರಿಕಲ್ಪನೆಗಳ ಮೂಲಕ ಬಲವಾದ ಸ್ತ್ರೀ ಪಾತ್ರ ತೋರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ರಾಕ್ಷಸ ಕಮರ್ಷಿಯಲ್ ಅಂಶಗಳಿರುವ ಹಾರರ್ ಚಿತ್ರವಾಗಿದೆ.  ಮದುವೆಗೂ ಮುನ್ನ ಸ್ಕ್ರೀಪ್ಟ್ ಆಯ್ಕೆಯಲ್ಲಿ ಇಂಡಸ್ತ್ರಿಯಲ್ಲಿ ನನಗೆ ಯಾರು ಮಾರ್ಗದರ್ಶಕರು ಇರಲಿಲ್ಲ. ಈಗ ತರುಣ್ ಪಾತ್ರಗಳ ಆಯ್ಕೆಯಲ್ಲಿ ಸೂಕ್ತ ಬೆಂಬಲ ನೀಡುತ್ತಾರೆ. ಮದುವೆಗೂ ಮುನ್ನ ಸಹಿ ಮಾಡಲಾದ ಚಿತ್ರಗಳನ್ನು ಪೂರ್ಣಗೊಳಿಸಿದ್ದೇನೆ. ಸ್ವಲ್ಪ ವಿರಾಮ ಪಡೆದುಕೊಂಡಿದ್ದೆ. ಆದರೆ ಈ ಮತ್ತೆ ಹೊಸ ಉತ್ಸಾಹದೊಂದಿಗೆ ಕಂಬ್ಯಾಕ್ ಆಗಿರುವುದಾಗಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!