ಶ್ರೇಷ್ಠ ಅಭಿನಯದ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾ ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಎಂದು ಹೇಳಲಾಗಿದೆ.
ಅಭಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಷ್ಠ, ನಿಶ್ವಿಕಾ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಯಶ್ ಶೆಟ್ಟಿ, ಅಪೂರ್ವ ತೆರೆ ಹಂಚಿಕೊಂಡಿದ್ದಾರೆ. ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಮನೆ ಹುಡುಗ, ಟಗರು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದಿದ್ದ ಅಭಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ಮಾಸ್ತಿ ಮತ್ತು ಅಭಿ ಡೈಲಾಗ್ ಬರೆದಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಶ್ರೀನಿವಾಸ ಛಾಯಾಗ್ರಹಣವಿದೆ. ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಹಣ ಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಳಕಲ್, ಗಂಜಿಹಾಳ, ಕೂಡಲಸಂಗಮದ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.
—-

Be the first to comment