ಸಂಗೀತ್ ಸಾಗರ್ ನಿರ್ದೇಶನದ ಸ್ನೇಹಿತ ಚಿತ್ರ ನವೆಂಬರ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಈ ಸಿನಿಮಾದ ವಿಡಿಯೋ ಸಾಂಗ್ ಯೂಟ್ಯೂಬ್ ನಲ್ಲಿ ಈಗಾಗಲೇ ಬಿಡುಗಡೆ ಆಗಿದ್ದು ಸಿನಿಪ್ರಿಯರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಆಕಾಶ್ ಆಡಿಯೋ ಕಂಪನಿ ಈ ಸಿನಿಮಾದ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದೆ.
ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿರುವ “ಪ್ರೀತಿ ಒಂಥರ” ಹಾಡು ಸದ್ದು ಮಾಡುತ್ತಿದೆ. ಒಂದು ದಿನದ ಒಳಗೆ ಈ ಹಾಡನ್ನು 2 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿ ಮೆಚ್ಚುಗೆಯ ಮಾತನಾಡಿದ್ದಾರೆ. ಈ ಚಿತ್ರದ ಇನ್ನೊಂದು ವಿಡಿಯೋ ಸಾಂಗ್ ” ಮಿಂಚಾದೆ ನೀನು ” 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈಶ್ವರ್ ಪ್ರಕಾಶ್, ಅನುಪಮ ಈ ಹಾಡನ್ನು ಹಾಡಿದ್ದಾರೆ.
ಸಂಗೀತ್ ಸಾಗರ್ ನಿರ್ದೇಶನದ ಸ್ನೇಹಿತ ಚಿತ್ರದಲ್ಲಿ ಧನುಷ್ ನಾಯಕ ಆಗಿ ನಟನೆ ಮಾಡಿದ್ದಾರೆ. ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತವನ್ನು ಸಂಗೀತ್ ಸಾಗರ್ ಅವರೇ ನೀಡಿದ್ದಾರೆ. ಚಿತ್ರದಲ್ಲಿ ಸುಲಕ್ಷಾ ಅವರು ನಾಯಕಿ ಆಗಿ ನಟಿಸಿದ್ದಾರೆ. ಹಿರಿಯ ನಟ ಉಮೇಶ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರವನ್ನು ಆರ್ ಅಶೋಕ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದ ಬಿಡುಗಡೆಗೆ ಚಿತ್ರತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
___

Be the first to comment