ಜಾನಪದ ಗಾಯಕಿ ಅನನ್ಯಾ ಭಟ್ ನಾಯಕಿಯಾಗಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂಬಡ್ತಿ ಪಡೆದಿದ್ದಾರೆ.
ಅನನ್ಯಾ ಭಟ್ ‘ಸೇನಾಪುರ’ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಸದ್ದು ಮಾಡುತ್ತಿದೆ.
ಬಳ್ಳಾರಿಯ ಗಣಿಯಲ್ಲಿ ನಡೆದಿದ್ದ ವಿದ್ಯಾಮಾನಗಳ ಸುತ್ತ ನಡೆದ ಸತ್ಯ ಘಟನೆಗಳನ್ನು ಆಧರಿಸಿ ‘ಸೇನಾಪುರ’ ಚಿತ್ರ ನಿರ್ಮಿಸಲಾಗಿದೆ. ಕುಂದಾಪುರ ಗುರುಸಾವನ್ ಚಿತ್ರಕ್ಕೆ ಕತೆ ಬರೆಯುವ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ.
ಸೇನಾಪುರ’ದ ಕತೆಯನ್ನು ವೆಬ್‌ಸೀರೀಸ್ ಗಾಗಿ ಹೆಣೆಯಲಾಗಿತ್ತು. ಆದರೆ ಮುಂದೆ ಅದು ಸಿನಿಮಾ ಕತೆಯಾಗಿ ಬದಲಾವಣೆಗೊಂಡು ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಸಿದ್ಧವಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ಅನನ್ಯ ಭಟ್ ಅವರು ಮೊದಲ ಬಾರಿ ಮಹಿಳಾ ಪ್ರಧಾನ ಕತೆಯಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸುವ ಜೊತೆಗೆ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅಮಿತ್ ಕುಮಾರ್, ರಾಹುಲ್ ದೇವ್ ಅವರು ವಿಮ್‌ಲಾಸ್ ಎಂಟರ್‌ಟೈನ್‌ಮೆಂಟ್ ಹಾಗೂ ಅಂಸ ಕ್ರಿಯೇಶನ್ಸ್ ಮೂಲಕ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿ ದಿನೇಶ್ ಮಂಗಳೂರು, ಬಿ.ಎಂ.ಗಿರಿರಾಜ್, ಸಿಂಧೂ, ಶೇಖರ್‌ರಾಜ್, ರೀನ, ಅಮೂಲ್ಯ, ಪರಮೇಶ್ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಯಾಗ್ರಹಣ , ಅರ್ಜುನ್ ಸಂಕಲನ, ಪ್ರಮೋದ್ ಮರವಂತೆ ಸಾಹಿತ್ಯ, ಅರ್ಜುನ್ ಶ್ರೀನಿವಾಸಯ್ಯ ಸಂಕಲನ ಚಿತ್ರಕ್ಕೆ ಇದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಸಿನಿಮಾದ ಡಬ್ಬಿಂಗ್ ಕೆಲಸ ಪ್ರಗತಿಯಲ್ಲಿದೆ.
ಅನನ್ಯಾ ಭಟ್ ಅವರಿಗೆ ” ಮಾದೇವ” ಜಾನಪದ ಗಿತೆಯ ಗಾಯನ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
Be the first to comment