ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಹಸಿಮಣೆ ಏರಲಿದ್ದಾರೆ.
ಮದುವೆ ಸಮಾರಂಭ ಮೈಸೂರು ಊಟಿ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಲಿದೆ.
ಮದುವೆ ಪೂರ್ವ ತಯಾರಿಗಾಗಿ ಸಂಸದ ಪ್ರತಾಪ್ ಸಿಂಹ ಜೊತೆ ಆಶ್ರಮಕ್ಕೆ ಆಗಮಿಸಿದ ಭಾವಿ ದಂಪತಿಗಳು ಸ್ವಾಮೀಜಿಗಳ ಆಶಿರ್ವಾದ ಪಡೆದರು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರಾಜೇಂದ್ರ ಈ ವೇಳೆ ಹಾಜರಿದ್ದರು.
ಆಶ್ರಮಕ್ಕೆ ಆಗಮಿಸಿದ ಭಾವಚಿತ್ರವನ್ನು ಸಂಸದ ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 2 ರಂದು ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.
ಈ ಜೋಡಿ ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕೈ ಹಿಡಿದು ಓಡಾಡಿದ ಫೋಟೋ ವೈರಲ್ ಆಗಿತ್ತು. ಆ ಬಳಿಕ ಇಬ್ಬರೂ ನಿಶ್ಚಿತಾರ್ಥದ ಪೋಟೋ ಹರಿಯ ಬಿಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದರು.
___

Be the first to comment