ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಘಟನಾವಳಿಗಳನ್ನೇ ಹೋಲುವ ಸಿನಿಮಾವೊಂದರ ಟೀಸರ್ ಬಿಡುಗಡೆಯಾಗಿದೆ!
ಟೀಸರ್ ಬಿಡುಗಡೆಯಾದ ಸಿನಿಮಾದ ಹೆಸರು ‘ಸಿಂಹಗುಹೆ’. ಈ ಚಿತ್ರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸುತ್ತ ಕಥೆ ಮಾಡಲಾಗಿದೆ. ಚಿತ್ರದ ಟೀಸರ್ ದೊಡ್ಡ ಸದ್ದು ಮಾಡುತ್ತಿದೆ ಹಾಗೂ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಟೀಸರ್ ನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.
ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಎಸ್‌ಜಿಆರ್ ಅವರದ್ದು. ಸರ್ವ ಕ್ರಿಯೇಶನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸಂಗೀತ ಮತ್ತು ಹಿನ್ನೆಲೆ ಸಂಗೀತ ಸತೀಶ್ ಆರ್ಯನ್, ಛಾಯಾಗ್ರಹಣ ಮಹೇಂದ್ರನ್, ಸಂಕಲನ ಮನು ರಂಗ ಕಹಳೆ ಅವರದ್ದು ಆಗಿದೆ. ನಾಯಕ ರವಿ ಶಿರೂರ್ ಅವರು ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಿವಿಶ್ಕಾ ಪಾಟೀಲ್ ಚಿತ್ರದ ನಾಯಕಿ ಆಗಿದ್ದಾರೆ.
ನಿರ್ದೇಶಕ ಎಸ್‌ಜಿಆರ್ ವರ್ಷದ ಹಿಂದೆಯೇ ನಮ್ಮ ಚಿತ್ರ ಸೆನ್ಸಾರ್ ಆಗಿತ್ತು. ಹೀರೋನೇ ಅಂಥಾ ವಿಡಿಯೋ ಮಾಡ್ತಾನಾ? ಯಾರು ಯಾಕೆ ಮಾಡ್ತಾನೆ ಅನ್ನೋದೇ ಸಸ್ಪೆನ್ಸ್ . ಮೊಬೈಲ್ ನಿಂದ ಏನೇನಾಗುತ್ತೆ ಅನ್ನೋದೂ ಚಿತ್ರದಲ್ಲಿದೆ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರ ಬಿಡುಗಡೆಗೆ ರೆಡಿ ಇದ್ದು, ಜೂನ್ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ದೊಡ್ಡ ಸದ್ದು ಮಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಾಡಲು ಚಿತ್ರನಿರ್ದೇಶಕರು ಮುಂದಾಗುತ್ತಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಹಲವು ದಿನಗಳಾಗಿದೆ. ಎಸ್‌ಐಟಿ ಪೊಲೀಸರು ಪ್ರಜ್ವಲ್ ರೇವಣ್ಣನಿಗೆ ಹುಡುಕಾಟ ನಡೆಸುತ್ತಿದ್ದಾರೆ. ಅವರ ತಂದೆ ಶಾಸಕ ಎಚ್.ಡಿ.ರೇವಣ್ಣ ಅವರು ಜಾಮೀನು ಸಿಕ್ಕಿದ ಬಳಿಕ ಮಂದಿರಗಳ ದರ್ಶನ ಮಾಡುತ್ತಿದ್ದಾರೆ.
Be the first to comment