ಸಿಕಂದರ್‌ ಕಲೆಕ್ಷನ್‌ ಡಲ್

ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್‌ ಖಾನ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಕಲೆಕ್ಷನ್‌ ಬಿಕೋ ಎನ್ನುತ್ತಿದೆ.

ಸಿಕಂದರ್‌ ಸಿನಿಮಾ ಈದ್‌ ಹಬ್ಬದ ವಿಶೇಷವಾಗಿ ನಿನ್ನೆ ತೆರೆಗೆ ಬಂದಿದೆ. ಮೊದಲ ದಿನದ ಕಲೆಕ್ಷನ್‌ ನಲ್ಲಿ  ಸಿಕಂದರ್‌ ಕಂಪ್ಲೀಟ್‌ ಡಲ್ ಹೊಡೆದಿದೆ. ದೊಡ್ಡ ಮಟ್ಟದಲ್ಲಿ  ರಿಲೀಸ್‌ ಆಗಿರುವ ಸಿಕಂದರ್‌ ಸಿನಿಮಾ ಸೋಲಿನ ಸುಳಿಯಲ್ಲಿ ಸಿಲುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಾಜಿದ್‌ ನಾಡಿಯಾಡ್ವಾಲಾ ‌ 200 ಕೋಟಿ ಬಜೆಟ್‌ನಲ್ಲಿ ಸಿಕಂದರ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರ  ಮೊದಲ ದಿನ ಭಾರತದಲ್ಲಿ ಕೇವಲ 26 ಕೋಟಿ ರೂಪಾಯಿಗಳನ್ನು ಗಳಿಸಿದೆ. 2023ರಲ್ಲಿ ತೆರೆಗೆ ಬಂದಿದ್ದ ಸಲ್ಮಾನ್‌ ಖಾನ್‌ ಅವರ  ಹಿಂದಿನ ಸಿನಿಮಾ   ಟೈಗರ್‌ 3 ಸಿನಿಮಾ ಮೊದಲ ದಿನವೇ 44.50 ಕೋಟಿ ಗಳಿಕೆ ಮಾಡಿತ್ತು.

ಎ.ಆರ್‌ .ಮುರುಗದಾಸ್‌ ನಿರ್ದೇಶನದಲ್ಲಿ ಸಿಕಂದರ್‌ ಮೂಡಿ ಬಂದಿದೆ. ದಕ್ಷಿಣದ  ಮುರುಗದಾಸ್‌ ಈ ಹಿಂದೆ ಆಮೀರ್‌ ಖಾನ್‌ ಗೆ ಘಜನಿ ಚಿತ್ರ ಮಾಡಿದ್ದರು.  ಸಲ್ಮಾನ್‌ ಖಾನ್‌ ಗೆಲುವಿಗಾಗಿ ದಕ್ಷಿಣದ ಮುರುಗದಾಸ್‌ ಹಿಂದೆ ಬಿದ್ದಿದ್ದರು. ಹೀಗಾಗಿ ಪೀಕ್‌ ನಲ್ಲಿರುವ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯಾಗಿ ಮಾಡಿದ್ದರು. ಆದರೆ ಈ  ಫಾರ್ಮುಲಾ ವರ್ಕೌಟ್‌ ಆಗಿಲ್ಲ. ಸಿಕಂದರ್‌  ಕಲೆಕ್ಷನ್‌ ನಲ್ಲಿ ಬಿಕೋ ಎನ್ನುತ್ತಿದೆ.

ಸಿಕಂದರ್‌ ಚಿತ್ರ ನೋಡಿದವರಿಗೂ ಇಷ್ಟವಾಗಿಲ್ಲ.  ಆನ್‌ಲೈನ್‌ ನಲ್ಲಿ ಇಡೀ ಚಿತ್ರ ಸೋರಿಕೆ ಕಂಡಿದ್ದು  ನಿರ್ಮಾಪಕರಿಗೆ ದೊಡ್ಡ ಪೆಟ್ಟು ಬಿದ್ದಂತಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!