ದಕ್ಷಿಣ ಭಾರತ ಸಿನಿಮಾಗಳ ಹಬ್ಬ – ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಸೆಪ್ಟಂಬರ್ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಅತ್ಯತ್ತುಮ ನಟನೆ, ನಿರ್ದೇಶನ, ನಿರ್ಮಾಣ ಹೀಗೆ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ನೀಡುವ ಸಿನಿಮಾ ಮಂದಿಯನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಭಾಷಾ ನಟಿ
ನಟಿ ಶೃತಿ ಹಾಸನ್ , ಬೆಂಗಳೂರಿಗೆ ಮರಳಿ ಬಂದಿರುವುದು ಖುಷಿ ಆಗಿದೆ. ಮೊದಲ ವರ್ಷ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದೆ. ಸೈಮಾ ಮತ್ತಷ್ಟು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಚಿತ್ರರಂಗದ ಮಂದಿಯನ್ನು , ಪ್ರತಿಭಾವಂತರನ್ನು ಗೌರವಿಸುವ ಕೆಲಸ ಮುಂದುವರಿಸಲಿ ಎಂದು ಹಾರೈಸಿದರು.
ನಟ ಡಾಲಿ ಧನಂಜಯ ಮಾತನಾಡಿ ಎರಡನೇ ಸೈಮಾ ದಿಂದ ಸಂಪರ್ಕವಿದೆ , ನಟಿ ಪ್ರಣೀತಾ ಪ್ರಣೀತಾ ಸುಭಾಷ್ ಅವರನ್ನು ನಾನು ಸೈಮಾದಲ್ಲಿ ಭೇಟಿಯಾಗಿದೆ ಎಂದರು. ನಟಿ ಪ್ರಣೀತಾ ಸುಭಾಷ್ ಮಾತನಾಡಿ ಸೈಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ಮಾತನಾಡಿ , ಸತತ 11 ನೇ ವರ್ಷದಿಂದ “ಸೈಮಾ” ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಶಸ್ತಿ ನೀಡುವಲ್ಲಿ ಮುಂಚೂಣಿಯಲ್ಲಿದ್ದೇವೆ. ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು. ಈ ಬಾರಿ “ಸೈಮಾ” ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭದ ದುಬೈ ನಲ್ಲಿ ನಡೆಯಲಿದೆ. ದಕ್ಷಿಣ ಭಾರತದ ಪ್ರತಿಭೆಗಳನ್ನು ಈ ಬಾರಿ ಹೆಚ್ಚು ಹೆಚ್ಚು ಪ್ರದರ್ಶನ ಮಾಡಲಾಗುವುದು. ಈ ಬಾರಿ ಹೆಚ್ಚು ಚಿತ್ರಗಳಿವೆ ಎಂದರು.
Be the first to comment