ರಿಷಬ್, ರಕ್ಷಿತ್, ಯಶ್ ಸೇರಿ ಕನ್ನಡದ ಖ್ಯಾತನಾಮರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಮುಡಿಗೇರಿಸಿಕೊಂಡಿದ್ದಾರೆ.
11ನೇ ಆವೃತ್ತಿಯ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಶುಕ್ರವಾರ ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಇಂದೂ ಕೂಡ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ. ಮತ್ತೆ ಹಲವರ ಪಾಲಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಲಿದೆ.
ಕಾಂತಾರ ಸಿನಿಮಾದ ನಟನೆಗೆ ರಿಷಬ್ ಶೆಟ್ಟಿ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ವಿಶೇಷ ಮೆಚ್ಚುಗೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಕಾಂತಾರ ಚಿತ್ರದ ಅಚ್ಯುತ್ ಕುಮಾರ್ ನೆಗೆಟಿವ್ ರೋಲ್ಗೆ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. ಗಾಳಿಪಟ 2 ಚಿತ್ರದ ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ದೂದ್ಪೇಡಾ ದಿಗಂತ್ ಪಡೆದುಕೊಂಡಿದ್ದಾರೆ.
ಸೈಮಾ ಪ್ರಶಸ್ತಿವಿಜೇತರು:
ರಿಷಬ್ ಶೆಟ್ಟಿ – ಕಾಂತಾರ – ಅತ್ಯುತ್ತಮ ನಟ (ಕ್ರಿಟಿಕ್ಸ್) ಪ್ರಶಸ್ತಿ.
ರಿಷಬ್ ಶೆಟ್ಟಿ – ಕಾಂತಾರ – ವಿಶೇಷ ಮೆಚ್ಚುಗೆ ಪ್ರಶಸ್ತಿ.
ರಿಷಬ್ ಶೆಟ್ಟಿ – ಕಾಂತಾರ – ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
ಅಚ್ಯುತ್ ಕುಮಾರ್ – ಕಾಂತಾರ – ನೆಗೆಟಿವ್ ರೋಲ್ಗೆ ಅತ್ಯುತ್ತಮ ನಟ ಪ್ರಶಸ್ತಿ.
ಸಪ್ತಮಿ ಗೌಡ – ಕಾಂತಾರ – ಅತ್ಯುತ್ತಮ ನಟಿ (ವಿಮರ್ಷಕರ ಆಯ್ಕೆ) ಪ್ರಶಸ್ತಿ.
ರಕ್ಷಿತ್ ಶೆಟ್ಟಿ – 777 ಚಾರ್ಲಿ – ಅತ್ಯುತ್ತಮ ಚಿತ್ರ (ಪರಂವಃ ಸ್ಟುಡಿಯೋಸ್) ಪ್ರಶಸ್ತಿ.
ರಕ್ಷಿತ್ ಶೆಟ್ಟಿ – 777 ಚಾರ್ಲಿ – ಅತ್ಯುತ್ತಮ ನಟ ಪ್ರಶಸ್ತಿ.
ದಿಗಂತ್ – ಗಾಳಿಪಟ 2 – ಪೋಷಕ ಪಾತ್ರ ಅತ್ಯುತ್ತಮ ನಟ ಪ್ರಶಸ್ತಿ.
ಯಶ್ – ಕೆಜಿಎಫ್ 2 – ಅತ್ಯುತ್ತಮ ನಟ ಪ್ರಶಸ್ತಿ.
ಶ್ರೀನಿಧಿ ಶೆಟ್ಟಿ – ಕೆಜಿಎಫ್ 2 – ಅತ್ಯುತ್ತಮ ನಟಿ ಪ್ರಶಸ್ತಿ.
ಪೃಥ್ವಿ ಶಾಮನೂರು – ಪದವಿ ಪೂರ್ವ – ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ.
ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ – ಡೊಳ್ಳು – ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ ಪ್ರಶಸ್ತಿ.
ಸಾಗರ್ ಪುರಾಣಿಕ್ – ಡೊಳ್ಳು – ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ.
ಶುಭಾ ರಕ್ಷಾ – ಹೋಮ್ ಮಿನಿಸ್ಟರ್ – ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ.
ಪ್ರಕಾಶ್ ತುಮಿನಾಡ್ – ಕಾಂತಾರ – ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ.
ಭುವನ್ ಗೌಡ – ಕೆಜಿಎಫ್ ಚಾಪ್ಟರ್ 2 – ಅತ್ಯುತ್ತಮ ಛಾಯಾಗ್ರಹಣ.
ಸುನಿಧಿ ಚೌಹಾಣ್ – ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು – ಅತ್ಯುತ್ತಮ ಗಾಯಕಿ ಪ್ರಶಸ್ತಿ.
ವಿಜಯ್ ಪ್ರಕಾಶ್ – ಕಾಂತಾರದ ಸಿಂಗಾರ ಸಿರಿಯೇ ಸಾಂಗ್ – ಅತ್ಯುತ್ತಮ ಗಾಯಕ ಪ್ರಶಸ್ತಿ.
ಪ್ರಮೋದ್ ಮರವಂತೆ – ಕಾಂತಾರದ ಸಿಂಗಾರ ಸಿರಿಯೇ ಸಾಂಗ್ – ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ.
ಅಜನೀಶ್ ಲೋಕನಾಥ್ – ಕಾಂತಾರ – ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ.
ಮುಕೇಶ್ ಲಕ್ಷ್ಮಣ್ – ಕಾಂತಾರ – ವಿಶೇಷ ಮೆಚ್ಚುಗೆ ಪ್ರಶಸ್ತಿ.
ನೀತಾ ಅಶೋಕ್ – ವಿಕ್ರಾಂತ್ ರೋಣ – ಅತ್ಯುತ್ತಮ ಉದಯೋನ್ಮುಖ ನಟಿ.
——-
Post Views:
166
Be the first to comment