ನೀರ್ ದೋಸೆ ಖ್ಯಾತಿಯ ವಿಜಯ ಪ್ರಸಾದ್ ನಿರ್ದೇಶನದ ಸಿದ್ಲಿಂಗು 2 ಚಿತ್ರ ಪ್ರೇಮಿಗಳ ದಿನ ಫೆಬ್ರವರಿ 14ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.
ಚಿತ್ರ ತನ್ನ ಶೂಟಿಂಗ್ ಪ್ರಕ್ರಿಯೆಗೊಳಿಸಿದ್ದು ಈಗ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದೆ. ಈಗಾಗಲೇ ಡಬ್ಬಿಂಗ್ ಮುಗಿದಿದ್ದು , ಸಿದ್ಲಿಂಗು ಸೀಕ್ವೆಲ್ 12 ವರ್ಷಗಳ ನಂತರ ಬರುತ್ತಿದೆ.
ಸಿದ್ಲಿಂಗು ಚಿತ್ರ ವಿಜಯ ಪ್ರಸಾದ್ ನಿರ್ದೇಶಿಸಿದ್ದರು. ಯೋಗಿ ಮತ್ತು ರಮ್ಯಾ, ಸುಮನ್ ರಂಗನಾಥ್ ನಟಿಸಿದ್ದರು. ಸಿದ್ಲಿಂಗು ಸೀಕ್ವೆಲ್ ನಲ್ಲಿ ಯೋಗಿಗೆ ಸೋನು ಗೌಡ ನಾಯಕಿಯಾಗಿದ್ದಾರೆ. ಇದು ಅವರ ಮೊದಲ ಆನ್-ಸ್ಕ್ರೀನ್ ಸಹಯೋಗವಾಗಿದೆ.
ಮುಂದಿನ ವಾರದಲ್ಲಿ ಸೋನು ಗೌಡ ಅವರ ಫಸ್ಟ್ ಲುಕ್ ಅನಾವರಣಗೊಳಿಸಲು ತಂಡ ತಯಾರಿ ನಡೆಸುತ್ತಿದೆ. ನಂತರ ಒಂದು ಹಾಡಿನ ಲಿರಿಕಲ್ ವೀಡಿಯೊವನ್ನು ತಂಡ ಬಿಡುಗಡೆ ಮಾಡಲಿದೆ. ಬಿಡುಗಡೆಯ ದಿನಾಂಕದ ಹತ್ತಿರ ಮತ್ತೊಂದು ಟ್ರ್ಯಾಕ್‌ನ ಪೂರ್ಣ ವೀಡಿಯೊವನ್ನು ರಿಲೀಸ್ ಮಾಡುವ ಯೋಜನೆ ಇದೆ.
ಸಿದ್ಲಿಂಗು 2 ಚಿತ್ರವನ್ನು ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಖ್ಯಾತಿಯ ಶ್ರೀಹರಿ ರೆಡ್ಡಿ ಅವರು ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ ರಾಜು ಶೇರೆಘರ್ ಅವರ ಸಹಯೋಗದಲ್ಲಿ ನಿರ್ಮಿಸಿದ್ದಾರೆ. ಚಿತ್ರವನ್ನು ಕೌಟುಂಬಿಕ ಮನರಂಜನೆ ಎಂದು ಬಿಂಬಿಸಲಾಗಿದೆ.
Be the first to comment