ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ಸಿದ್ದು ಮೂಲಿಮನಿ

ರಿಯಲ್ ಘಟನೆ ಆಧರಿಸಿ ಮೂಡಿಬಂದ ‘ಲವ್ ಯು ಮುದ್ದು’ ಸಿನಿಮಾ ಬೆನ್ನಲ್ಲೇ ಸಿದ್ದು ಮೂಲಿಮನಿ ಅವರು ಇನ್ನೊಂದು ನೈಜ ಘಟನೆ ಆಧಾರಿತ ಸಿನಿಮಾ ‘ಸೀಟ್ ಎಡ್ಜ್’  ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ಯೂಟ್ಯೂಬರ್ ಪಾತ್ರವನ್ನು ಮಾಡಿದ್ದಾರೆ.   ಉತ್ತರ ಭಾರತದ ಘೋಸ್ಟ್ ಹಂಟರ್ ಖ್ಯಾತಿಯ ಗೌರವ್ ತಿವಾರಿ ಅವರ ಜೀವನದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ‘ಸೀಟ್ ಎಡ್ಜ್’ ಸಿನಿಮಾ ಸಿದ್ಧವಾಗುತ್ತಿದೆ. ಚೇತನ್ ಶೆಟ್ಟಿ ಅವರು ‘ಸೀಟ್ ಎಡ್ಜ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ಸಿನಿಮಾದಲ್ಲಿ ನಿಗೂಢ ಸ್ಥಳವೊಂದಕ್ಕೆ ಘೋಸ್ಟ್ ಹಂಟಿಂಗ್ ವಿಡಿಯೋ ಮಾಡಲು ಹೋಗುವ ಯೂಟ್ಯೂಬರ್ ಹುಡುಗನೊಬ್ಬ  ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಾನೆ ಎಂಬುದರ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಕನ್ನಡದ ಮಟ್ಟಿಗೆ ಇದು  ಹೊಸ ಬಗೆಯ ಪ್ರಯೋಗಾತ್ಮಕ ಸಿನಿಮಾ. ಶೀರ್ಷಿಕೆಗೆ ತಕ್ಕಂತೆಯೇ ಪ್ರೇಕ್ಷಕರನ್ನು ಈ ಸಿನಿಮಾ ‘ಸೀಟ್ ಎಡ್ಜ್’ನಲ್ಲಿ ಕೂರಿಸುತ್ತದೆ’ ಎಂದು ನಟ ಸಿದ್ದು ಮೂಲಿಮನಿ ಹೇಳಿದ್ದಾರೆ.

ಗಿರಿಧರ ಟಿ. ವಸಂತಪುರ  ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ರವೀಕ್ಷಾ ಶೆಟ್ಟಿ  ನಾಯಕಿಯಾಗಿ ಅಭಿನಯಿಸಿದ್ದಾರೆ. ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ ಮುಂತಾದ ಕಲಾವಿದರು ಸಿನಿಮಾದಲ್ಲಿ ಇದ್ದಾರೆ. 2026ರ ಆರಂಭದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!