ಶ್ವೇತಾ ಶ್ರೀವಾತ್ಸವ್‌ ಅಭಿನಯದ ‘ಹೋಪ್‌’ಚಿತ್ರ ತೆರೆಗೆ ಸಿದ್ದ

ನಟಿ ಶ್ವೇತಾ ಶ್ರೀವಾತ್ಸವ್‌ ಅಭಿನಯದ “ಹೋಪ್‌’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸಣ್ಣದೊಂದು ಗ್ಯಾಪ್‌ ಬಳಿಕ “ಹೋಪ್‌’ ಸಿನಿಮಾದ ಮೂಲಕ ತೆರೆಮೇಲೆ ಬರುತ್ತಿರುವ ಶ್ವೇತಾ ಶ್ರೀವಾತ್ಸವ್‌, ಈ ಸಿನಿಮಾದಲ್ಲಿ ಕೆಎಎಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ಜುಲೈ 8ಕ್ಕೆ “ಹೋಪ್‌’ ಸಿನಿಮಾವನ್ನು ಬಿಡುಗಡೆಯಾಗುತ್ತದೆ.

ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಜನಸಾಮಾನ್ಯರ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಂಟೆಂಟ್‌ ಆಧಾರಿತ ಸೋಶಿಯಲ್‌ ಡ್ರಾಮಾ “ಹೋಪ್‌’ ಸಿನಿಮಾವನ್ನು ಸ್ನೂಕರ್‌ ಆಟಗಾರ್ತಿ ವರ್ಷಾ ಸಂಜೀವ್‌ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಅಂಬರೀಶ್‌ “ಹೋಪ್‌’ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪೊಲಿಟಿಕಲ್‌ ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬಂದಿರುವ “ಹೋಪ್‌’ ಸಿನಿಮಾದಲ್ಲಿ ನಾಯಕ ನಟಿ ಶ್ವೇತಾ ಶ್ರೀವಾತ್ಸವ್‌ ಅವರೊಂದಿಗೆ ಸುಮಲತಾ ಅಂಬರೀಷ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಗೋಪಾಲಕೃಷ್ಣ ,ದೇಶಪಾಂಡೆ ಮೊದಲಾ ದವರು ಇತರ ಪ್ರಮುಖ ಅಭಿನಯಿಸಿದ್ದಾರೆ.

ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದರೂ, ಕೋವಿಡ್‌ ಆತಂಕ ಸಿನಿಮಾದ ಬಿಡುಗಡೆಗೆ ಬ್ರೇಕ್‌ ಹಾಕಿತ್ತು. ಕೊರೊನಾ ಕಾರಣದಿಂದ ಸಿನಿಮಾದ ಬಿಡುಗಡೆಯನ್ನು ಮುಂದೂಡುತ್ತ ಬಂದಿದ್ದ ಚಿತ್ರತಂಡ, ಇದೀಗ ಅಂತಿಮವಾಗಿ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದೆ.

ಬೆಂಗಳೂರು ಸುತ್ತಮುತ್ತ ಸುಮಾರು 34 ದಿನಗಳ ಕಾಲ “ಹೋಪ್‌’ ಸಿನಿಮಾದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರಕ್ಕೆ ಹಾಲೇಶ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನ ವಿದೆ. ಚಿತ್ರದ ಹಾಡುಗಳಿಗೆ ರಿತ್ವಿಕ್‌ ಮುರಳೀಧರ್‌ ಸಂಗೀತ ಸಂಯೋಜಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!