“ಶ್ವೇತಾ ಪ್ರಸಾದ್” ತೆರೆಯ ಹಿಂದಿನ ಬದುಕಿನತ್ತಇಣುಕು ನೋಟ

ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಷೋ “ತುತ್ತಾ ಮುತ್ತಾ”ದ ಈ ವಾರದ ಸಂಚಿಕೆಯಲ್ಲಿವಿಶೇಷ ಅತಿಥಿಯಾಗಿಧಾರಾವಾಹಿಯ ನಟಿಯಾದ ಶ್ವೇತಾ ಪ್ರಸಾದ್,ಪತಿಆರ್.ಜೆ.ಪ್ರದೀಪ ಹಾಗೂ ತಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿಗಂಡಸರುತಮಗೆತುತ್ತು ನೀಡಿದತಾಯಿ ಮತ್ತು ಮುತ್ತು ನೀಡಿದಹೆಂಡತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು, ಆದರೆ ಈ ವಾರ ಶ್ವೇತಾರವರುತಮ್ಮ ಪತಿ ಹಾಗು ತಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಶ್ವೇತಾರವರು ಸಣ್ಣ ಪರದೆಯಲ್ಲಿಎಲ್ಲರ ಮನೆಮಾತಾಗಿದ್ದರೇ,ಪ್ರತಿ ಮನೆಯ ಮೂಲೆಗೂ ತಮ್ಮಧ್ವನಿಯಿಂದ ಜನಪ್ರಿಯತೆ ಪಡೆದವರು ಆರ್.ಜೆ.ಪ್ರದೀಪ.ಇವರಿಬ್ಬರು ಗೆಳೆತನ ಪ್ರೀತಿಗೆ ಹೇಗೆ ಬದಲಾಯಿತೆಂದು ಕಾರ್ಯಕ್ರಮದಲ್ಲಿ ಹೇಳಿಕೊಂಡರು.ಕಾಲೇಜಿನಲ್ಲಿ ಸ್ನೇಹಿತರಾಗಿದ್ದೇವು. ಅವನೇ ಮೊದಲು ನನ್ನ ಪ್ರೀತಿಸುವುದಾಗಿ ಹೇಳಿಕೊಂಡ.ಒಂದು ಸಂಜೆ ನಾವು ಮಳೆಯಲ್ಲಿ ನಡೆದ ಹೋಗುತ್ತಿದ್ದಾಗ ಆತರೇಡಿಯೋದಲ್ಲಿ ನನಗಾಗಿ ಒಂದು ಹಾಡನ್ನು ಅರ್ಪಿಸಿ ತನ್ನ ಭಾವನೆಗಳನ್ನು ಹಂಚಿಕೊಂಡ ನಾನು ಅದಕ್ಕೆ ಗಮನ ನೀಡಲಿಲ್ಲ. ಯಾವಾಗ ಅವನು ನನಗೂತಿಳಿಸದೇ ನಮ್ಮ ಮನೆಗೆ ಹೋಗಿ, ನನ್ನ ತಾಯಿತಂದೆಗೆ ಕೇಳಿಕೊಂಡನೋ, ಅಂದೆಅವರ ಪ್ರೀತಿಯಅರಿವಾಗಿದ್ದುಎಂದು ಹಂಚಿಕೊಂಡರು.

ಪ್ರದೀಪನ ಮನೆಯ ಸಂಪ್ರದಾಯದ ಪ್ರಕಾರ ಅರಿಶಿನ ಶಾಸ್ತ್ರವುಇಲ್ಲದಕಾರಣ. ಅವರ ಮದುವೆಯಲ್ಲಿಆ ಶಾಸ್ತ್ರವು ನಡೆಯಲಿಲ್ಲ. ಇದು ಶ್ವೇತಾ ಹಾಗು ತನ್ನತಾಯಿಗೆ ಮನಸ್ಸಲ್ಲಿಯೇಕುಳಿತಿತ್ತು ಅದನ್ನುತುತ್ತಾ ಮುತ್ತಾಕಾರ್ಯಕ್ರಮದಲ್ಲಿ ಹೇಳಿಕೊಂಡರು. ಆಗ ತುತ್ತಾ ಮುತ್ತಾತಂಡ ಈ ಸಂಚಿಕೆಯಲ್ಲಿ ಶ್ವೇತಾರವರಿಗೆ ಅರಿಶಿನದ ಶಾಸ್ತ್ರವನ್ನು ಏರ್ಪಡಿಸಿ ತಾಯಿ ಮಗಳಿಬ್ಬರನ್ನು ಸಂತೋಷಪಡಿಸಿದರು.ಇಂತಹ ಸುಂದರ ದಂಪತಿಯ ಬಗ್ಗೆ ಹೆಚ್ಚು ತಿಳಿಯಲು ಈ ವಾರದತುತ್ತಾ ಮುತ್ತಾ ಸಂಚಿಕೆಯನ್ನುಇದೇ ಶನಿವಾರರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ವೀಕ್ಷಿಸಿ.

“ತುತ್ತಾ ಮುತ್ತಾ” ಇದೇ ಶನಿವಾರರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

This Article Has 1 Comment
  1. Pingback: Agile DevOps

Leave a Reply

Your email address will not be published. Required fields are marked *

Translate »
error: Content is protected !!