ಮಲಯಾಳಂ ಕಲಾವಿದರ ಸಂಘದ ಅಧ್ಯಕ್ಷರಾಗಿ ಶ್ವೇತಾ ಮೆನನ್

ಮಲಯಾಳಂ ಕಲಾವಿದರ ಸಂಘದ 31 ವರ್ಷದ ಸಂಘಟನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದಾರೆ.

ಮಲಯಾಳಂ ಕಲಾವಿದರ ಸಂಘದ ಅಧ್ಯಕ್ಷರಾಗಿ ನಟಿ ಶ್ವೇತಾ ಮೇನನ್,  ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕುಪರಮೇಶ್ವರನ್ , ಖಜಾಂಚಿಯಾಗಿ ಉಣ್ಣಿ ಶಿವಪಾಲ್ , ಉಪಾಧ್ಯಕ್ಷರಾಗಿ ಲಕ್ಷ್ಮಿಪ್ರಿಯಾ ಮತ್ತು ಜಯನ್ ಚೆರ್ತಾಲ ಆಯ್ಕೆಯಾಗಿದ್ದಾರೆ.

ಮಲಯಾಳಂ  ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು  ಕೆ. ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸಂಘದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದಿತ್ತು.  ಈ ಬೆಳವಣಿಗೆ ನಂತರ ನಟ ಮೋಹನ್ ಲಾಲ್ ನೇತೃತ್ವದ ಹಿಂದಿನ ಸಮಿತಿಯು ಆಗಸ್ಟ್ 2024 ರಲ್ಲಿ ರಾಜೀನಾಮೆ ನೀಡಿತ್ತು. ಹೀಗಾಗಿ ಇಲ್ಲಿ ಚುನಾವಣೆ ಅಗತ್ಯವಾಯಿತು.

ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸೇರಿದಂತೆ ಹಿರಿಯ ನಟರು ಸಂಘದಲ್ಲಿ ಪ್ರಮುಖ ಪಾತ್ರಗಳಲ್ಲಿ ಮಹಿಳೆಯರನ್ನು ನೇಮಿಸಬೇಕೆಂಬ ಹೆಚ್ಚುತ್ತಿರುವ ಕೂಗಿಗೆ ಒಪ್ಪಿಕೊಂಡ ನಂತರ ಶ್ವೇತಾ ಮೆನನ್ ಅವರ ಉಮೇದುವಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿತು. ಅಧ್ಯಕ್ಷ ಸ್ಥಾನಕ್ಕೆ ಆರಂಭದಲ್ಲಿ ನಾಮಪತ್ರ ಸಲ್ಲಿಸಿದ್ದ ಹಿರಿಯ ನಟ ಜಗದೀಶ್, ಮಹಿಳಾ ಅಧ್ಯಕ್ಷರಿಗೆ ಬೆಂಬಲ ನೀಡಿದ ನಂತರ ಹಿಂದೆ ಸರಿದರು. ಹೀಗಾಗಿ ಶ್ವೇತಾ ಮೆನನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ನಟಿ ಶ್ವೇತಾ ಮೆನನ್, ” ನನಗೆ ಒಂದು ಕಾರ್ಯಸೂಚಿ ಇದೆ. ಇದು ತುಂಬಾ ದೊಡ್ಡ ವಿಷಯ. ದಯವಿಟ್ಟು ಪವಾಡಗಳನ್ನು ನಿರೀಕ್ಷಿಸಬೇಡಿ. ಆದರೆ ನಾವು  ಏನನ್ನಾದರೂ ಮಾಡುತ್ತೇವೆ’ ಎಂದು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!