Shubman Gill: ಸಿನಿಮಾಕ್ಕೆ ಕಂಠದಾನ ಮಾಡುತ್ತಿರುವ ಕ್ರಿಕೆಟಿಗ

ಕ್ರಿಕೆಟರ್ ಶುಭಮನ್ ಗಿಲ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಶುಭಮನ್ ಗಿಲ್ ಅಕ್ರಾಸ್ ದಿ ಸ್ಪೈಡರ್ ವರ್ಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ- ಪಂಜಾಬಿ ವರ್ಷನ್‌ನಲ್ಲಿ ಮುಖ್ಯ ನಾಯಕನಿಗೆ ಶುಭಮನ್ ವಾಯ್ಸ್ ನೀಡಿದ್ದಾರೆ. ಈ ಅನಿಮೇಟೆಡ್ ಟ್ರೈಲರ್ ಜೂನ್ 2ರಂದು ರಿಲೀಸ್ ಆಗಲಿದೆ.

ಶುಭಮನ್ ಗಿಲ್ ಸಾರಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಸದ್ದು ಮಾಡಿದ್ದರು. ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯ ವಿಚಾರವಾಗಿಯೂ ಅವರು ಸದ್ದು ಮಾಡಿದ್ದರು.

ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿರುವ ಶುಭಮನ್ ಗಿಲ್, ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಕಂಠದಾನ ಮಾಡುವ ಮೂಲಕ ಸಿನಿಮಾ ಜಗತ್ತಿಗೆ ಹೆಜ್ಜೆ ಹಾಕಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!