ನ್ಯೂಸ್ ಪೇಪರ್​ ಡ್ರೆಸ್​​ ನಲ್ಲಿ ಮಿಂಚಿದ ನಟಿ ಶುಭಾ ರಕ್ಷಾ

ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶುಭಾ ರಕ್ಷಾ ನ್ಯೂಸ್​ ಪೇಪರ್​ ಅನ್ನು ಡ್ರೆಸ್​ ಮಾಡಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದು ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದೆ.ನ್ಯೂಸ್​ ಪೇಪರ್​ ಅನ್ನು ಡ್ರೆಸ್​ ಮಾಡಿಕೊಂಡು ಫೋಟೋಗೆ ಪೋಸ್​ ಕೊಟ್ಟ ಈ ಹಾಟ್​ ಸುಂದರಿ ಅಪ್ಪಟ ಕನ್ನಡದ ಹುಡುಗಿ ‘ಗುಡುಗು‘, ‘ಆ್ಯಪಲ್​ ಕೇಕ್​, ‘ಮೂಕ ವಿಸ್ಮಿತ‘ ಸಿನಿಮಾದಲ್ಲಿ ನಟಿಸಿರುವ ನಟಿ ಶುಭಾ ರಕ್ಷಾ 2015ರಲ್ಲಿ ಮಿಸ್​ ಸೌತ್​ ಎಲಿಗಂಟ್​ ಸೌಂದರ್ಯ ಸ್ಪರ್ಧೆ ಗೆದ್ದ ಸುಂದರಿ.

ಮೂಲತಃ ಮಾಡೆಲ್​ ಆದ ಇವರು ಈಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಮಿಂಚುಳ್ಳಿ ಮಾಡೆಲಿಂಗ್ ಕ್ಷೇತ್ರದಲ್ಲಿ ಕ್ಯಾಟ್ ವಾಕ್ ಮಾಡುತ್ತಿದ್ದ ಶುಭಾ ರಕ್ಷಾ ಕಳೆದ ವರ್ಷ ” ಗುಡುಗು” ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು ” ಗುಡುಗು” ಚಿತ್ರದಲ್ಲಿ ಪಕ್ಕಾ ಟ್ರೆಡಿಷನಲ್ ಹಾಗೂ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡರು.

ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದೆ ತಮಿಳಿನಲ್ಲೂ ಚಾಪು ಮೂಡಿಸಿದ್ದು ‘ವೈ ಪೈ‘, ‘ಎಫ್​ ಬಿ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ನೀನಿಲ್ಲದ ಹೃದಯ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಇವರ ಅಭಿನಯದ ರಿಯಲ್​ ಸ್ಟಾರ್​ ಉಪೇಂದ್ರ ನಟನೆಯ ‘ಹೋಮ್​ ಮಿನಿಸ್ಟರ್​‘ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!