ಚೈತ್ರ ಪ್ರಕಾಶ್ ನಿರ್ಮಿಸಿರುವ ಶಭಾಷ್ ಬಡ್ಡಿಮಗ್ನೆ ಚಿತ್ರ ಫೆಬ್ರುವರಿ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಬಿಎಸ್ ರಾಜಶೇಖರ್ ನಿರ್ದೇಶನದ ‘ಶಭಾಷ್ ಬಡ್ಡಿಮಗ್ನೆ’ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ರೊಮ್ಯಾಂಟಿಕ್ ಲುಕ್‌ನಲ್ಲಿ ನಟಿಸಿದ್ದಾರೆ. ಪೊಲೀಸ್ ಆಗಿ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಚಿತ್ರ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ನಡೆದ 1980ರ ದಶಕದ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದೆ.
‘ಈ ಚಿತ್ರದಲ್ಲಿ ಸೋಂಬೇರಿ ಪೊಲೀಸ್ ಅಧಿಕಾರಿಯಾಗಿ ನಟಿಸುವುದು ಸಂಪೂರ್ಣವಾಗಿ ಹೊಸದು ಮತ್ತು ಸವಾಲಿನ ಸಂಗತಿಯಾಗಿದೆ. ಸ್ಕ್ರಿಪ್ಟ್‌ನಲ್ಲಿರುವ ಕುತೂಹಲಕಾರಿ ಮತ್ತು ಹಾಸ್ಯಮಯ ಅಂಶಗಳ ಬಗ್ಗೆ ನಾನು ಉತ್ಸುಕನಾಗಿದ್ದೆ. ಈ ಪಾತ್ರ ಬೇಡ ಎಂದು ಹೇಳಲು ಸಾಧ್ಯವಾಗಲಿಲ್ಲ’ ಎಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.
ಚಿತ್ರಕ್ಕೆ ರಾಜಶೇಖರ್ ಕಥೆ ಬರೆದಿದ್ದಾರೆ. ಚಿತ್ರದಲ್ಲಿಆದ್ಯಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸಾಮ್ರಾಟ್ ಶೆಟ್ಟಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ತಾರಾಗಣದಲ್ಲಿ ಕಾವ್ಯ ಪ್ರಕಾಶ್, ರವಿತೇಜ, ಮಿತ್ರ, ಶಂಕರ್ ಅಶ್ವತ್ಥ್ ಮತ್ತು ಪ್ರಕಾಶ್ ತೂಮಿನಾಡ್ ಇದ್ದಾರೆ. ಚಿತ್ರಕ್ಕೆ ಪ್ರಶಾಂತ್ ಸಿದ್ದಿ ಸಂಗೀತ, ಅಣ್ಣಾಜಿ ನಾಗರಾಜ್ ಅವರ ಛಾಯಾಗ್ರಹಣವಿದೆ.

Be the first to comment