‘ಮೀ ಟು ಅಭಿಯಾನದಿಂದ ಇಂಡಸ್ಟ್ರಿಯಲ್ಲಿ ಬದಲಾವಣೆ’

”ಮೀ ಟು ಅಭಿಯಾನದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಬದಲಾವಣೆಯಾಗಿದೆ.  ಈ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.

ರ್ಯಾಪಿಡ್​ ರಶ್ಮಿ ಷೋನಲ್ಲಿ ಮಾತನಾಡಿದ ಶ್ರುತಿ ಹರಿಹರನ್,  ”ನಾನು ಹಿಂದಿರುಗಿ ನೋಡಿದಾಗ ಅಂದು ಮಾಡಿರುವುದು ಕಂಡು ತುಂಬಾ ಖುಷಿಯಾಗುತ್ತಿದೆ. ಅವತ್ತು ನಾನು ಹೇಳಿದ ವಿಷಯದಿಂದಲೇ ಇಂದು ಕನ್ನಡ ಇಂಡಸ್ಟ್ರಿಯಲ್ಲಿ ಬದಲಾವಣೆ ಆಗುತ್ತಿದೆ. ಅಂದು ಲೈಂಗಿಕ ದೌರ್ಜನ್ಯದ ಕುರಿತು ಬಾಯಿ ಬಿಟ್ಟಿರುವ ಕಾರಣದಿಂದ ಇಂದು ಅಗಾಧ ಬದಲಾವಣೆ ಆಗಿದೆ” ಎಂದಿದ್ದಾರೆ.

ಶೃತಿ ಹರಿಹರನ್

”ಅಂದು ನಾನು ಈ ವಿಷಯವನ್ನು ಎತ್ತಿರಲಿಲ್ಲ ಎಂದಿದ್ದರೆ ಇಂದು ಕನ್ನಡ ಇಂಡಸ್ಟ್ರಿಯಲ್ಲಿ ಬದಲಾವಣೆ ಆಗುತ್ತಿರಲಿಲ್ಲ. ಇಂದು ಬಹಳ ಬದಲಾವಣೆ ಆಗಿದೆ. ಹೆಣ್ಣುಮಕ್ಕಳ ವಿಷಯಕ್ಕೆ ಬರುವ ಮೊದಲು ನೂರು ಬಾರಿ ಯೋಚನೆ ಮಾಡುವ ಹಾಗಾಗಿದೆ. ಕೊನೆಯ ಪಕ್ಷ ತಮಾಷೆಗಾದರೂ ಬೇಡಪ್ಪ ಬಿಡ್ರೋ ಮೀ ಟೂ ಹಾಕಿಬಿಡುತ್ತಾಳೆ ಎಂದು ಜೋಕ್​ ಮಾಡುವ ಮಟ್ಟಿಗಾದರೂ ಪುರುಷರು ಯೋಚನೆ ಮಾಡುತ್ತಿದ್ದಾರೆ. ಈ ಮೊದಲಾದರೆ ಇಟ್​ ಈಸ್​ ಓಕೆ ಎನ್ನುವ ಸ್ಥಿತಿಯಿತ್ತು. ಆದರೆ ಈಗ ಚಿಕ್ಕಮಟ್ಟದಲ್ಲಾದರೂ ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಅಂದು ಶುರು ಮಾಡಿರುವ ಮೀ-ಟು ಅಭಿಯಾನವೇ ಕಾರಣ” ಎಂದಿದ್ದಾರೆ ಶ್ರುತಿ.

ಶ್ರುತಿ ಹರಿಹರನ್

”ಚಿತ್ರೋದ್ಯಮ ಸೇಫ್​ ಅಲ್ಲ ಎನ್ನುವ ಹಣೆ ಪಟ್ಟಿಯಿಂದ ಈಗ ದೂರ ಸರಿಯುತ್ತಿದ್ದೇವೆ. ಯಾವುದಾದರೂ ಹೆಣ್ಣುಮಕ್ಕಳು ಇಂಡಸ್ಟ್ರಿಗೆ ಹೋಗಬೇಕು ಎಂದರೆ ‘ಬೇಡಪ್ಪಾ ಇದು ಕೊಳಕು’ ಅನ್ನುತ್ತಿದ್ದರು. ಆದರೆ ಈಗ ಬದಲಾವಣೆ ಆಗುತ್ತಿದೆ. ಹೆಣ್ಣುಮಕ್ಕಳಿಗೆ ಇದು ನಾಟ್​ ಸೇಫ್​ ಎನ್ನುವ ಮನಸ್ಥಿತಿ ಹೋಗಿದೆ. ನನಗೆ ಹಿಂದಿರುಗಿ ನೋಡಿದಾಗ ಅಂದು ನಾನು ಮಾಡಿರುವ ಬಗ್ಗೆ ಹೆಮ್ಮೆ ಇದೆ” ಎಂದಿದ್ದಾರೆ.

2018ರಲ್ಲಿ ನಟಿ ಶ್ರುತಿ ಹರಹರನ್​ ಅವರು, ನಟ ಅರ್ಜುನ್​ ಸರ್ಜಾ ಅವರ ವಿರುದ್ಧ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪ ಮೀ-ಟು ಅಭಿಯಾನದ ಮೂಲಕ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!