ವಿರಾಮದ ಸುಳಿವು ನೀಡಿದ ಶ್ರೇಯಾ ಘೋಷಾಲ್

ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅವರು ಸಂಗೀತದಿಂದ ವಿರಾಮ ಪಡೆಯುವ ಆಲೋಚನೆ ಬಂದಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಾ ಘೋಷಾಲ್, ‘ನಿರಂತರ ಕೆಲಸದ ಒತ್ತಡದ ನಡುವೆ ಕೆಲವೊಮ್ಮೆ ವಿಶ್ರಾಂತಿ ಅಗತ್ಯವಾಗುತ್ತದೆ. ಕೆಲವೊಮ್ಮೆ ನನಗೂ ಸಂಗೀತದಿಂದ ವಿರಾಮ ಪಡೆಯಬೇಕು ಎಂಬ ಅನಿಸಿಕೆ ಬರುತ್ತದೆ ಎಂದು ಅವರು  ಹೇಳಿದ್ದಾರೆ.

‘ಅರಿಜಿತ್ ಸಿಂಗ್ ಅವರು ಅತ್ಯಂತ ಧೈರ್ಯದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಸಂಗೀತ ಹೃದಯದಿಂದ ಬರುತ್ತದೆ. ಅವರು ಲಾಭಕ್ಕಾಗಿ ಅಲ್ಲ, ತಮ್ಮ ಸಂತೋಷಕ್ಕಾಗಿ ಹಾಡುತ್ತಾರೆ. ಅದಕ್ಕಾಗಿಯೇ ಅವರ ಹಾಡುಗಳು ಜನಮನ ಗೆಲ್ಲುತ್ತವೆ” ಎಂದು ಹೇಳಿದ್ದಾರೆ.

ವೇದಿಕೆಯಲ್ಲಿ ಲಿಪ್-ಸಿಂಕ್ ಮಾಡುವ  ಬಗ್ಗೆ ಶ್ರೇಯಾ ಘೋಷಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಲಿಪ್-ಸಿಂಕ್ ಮಾಡುವ ಪರಿಸ್ಥಿತಿ ಬಂದರೆ ನಾನು ಅಂದೇ ಹಾಡುವುದನ್ನು ನಿಲ್ಲಿಸುತ್ತೇನೆ’ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಜನವರಿ 27ರಂದು ಅರಿಜಿತ್ ಸಿಂಗ್   “ಇನ್ನು ಮುಂದೆ ಸಿನಿಮಾಗಳಿಗೆ ಹೊಸದಾಗಿ ಹಾಡುವುದಿಲ್ಲ” ಎಂದು ಘೋಷಣೆ ಮಾಡಿದ್ದರು. ಈ ನಿರ್ಧಾರ ಸಂಗೀತ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈಗ ಶ್ರೇಯಾ ಘೋಷಾಲ್ ಅವರ ಸಂಗೀತದಿಂದ ವಿರಾಮ ಪಡೆಯುವ ಆಲೋಚನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಶ್ರೇಯಾ ಘೋಷಾಲ್ , ಸಂಜಯ್ ಲೀಲಾ ಬನ್ಸಾಲಿ ಅವರ ‘ದೇವದಾಸ್’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.  ಅವರು  ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ  ಹಾಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!