ಕಿರುಚಿತ್ರದ ಮೂಲಕ ಗಮನ ಸೆಳೆದು ಬೆಳ್ಳಿತೆರೆಯಲ್ಲಿ ಭದ್ರ ಬುನಾದಿ ಹಾಕಿಕೊಂಡಿರುವ ಅನೇಕ ಪ್ರತಿಭಾವಂತರು ನಮ್ಮ ಚಿತ್ರರಂಗದಲ್ಲಿದ್ದಾರೆ, ಮೈಸೂರಿನ ವಿನಯ್ಕುಮಾರ್ ಅವರು ಕೂಡ ದಿ ಟ್ರೈನ್ ಮತ್ತು ಎರಡು ಗೋಡೆಗಳು ಎಂಬ ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದಾರೆ.
ದಿ ಟ್ರೈನ್ ಕಿರುಚಿತ್ರವು 8.51 ನಿಮಿಷ ಪ್ರದರ್ಶನಾವಧಿಯಿದ್ದರೆ, ಎರಡು ಗೋಡೆಗಳು ಕಿರುಚಿತ್ರಗಳು 36 ನಿಮಿಷಗಳ ಕಾಲ ನಡೆಯುತ್ತದೆ.ದಿ ಟ್ರೈನ್ ಕಿರುಚಿತ್ರದಲ್ಲಿ ತಾಯಿ ಹಾಗೂ ಮಗನ ಸೆಂಟಿಮೆಂಟ್ ಇದೆ. 1930-35ರ ಕಾಲಮಾನದಲ್ಲಿ ನಡೆಯುವ ಕತೆಯನ್ನು ಹೋಲುವಂತಿದ್ದು , ಅಮ್ಮನೊಂದಿಗೆ ಮಗನೊಬ್ಬ ಪಾರ್ಕ್ಗೆ ಹೋದಾಗ ಅವನಿಗೆ ರೈಲಿನಲ್ಲಿ ಪ್ರಯಾಣಸುವ ಬಯಕೆ ಆಗುತ್ತದೆ, ಆದರೆ ತಾಯಿಯ ಹತ್ತಿರ ಹಣ ಕಡಿಮೆ ಇರುತ್ತದೆ, ಆದರೂ ತನ್ನ ಮಗನ ಆಸೆಯನ್ನು ಈಡೇರಿಸಲು ಟಿಕೆಟ್ ಕೊಡಿಸಿ ತಾನು ಹೋಗದೆ ಮಗನ ಸುರಕ್ಷತೆಗಾಗಿ ಆತನನ್ನು ಚಾಲಕನ ಬಳಿ ಕುಳಿಸುತ್ತಾಳೆ, ರೈಲು ಚಲಿಸುವ ವೇಳೆಗೆ ಹಿರಿಯ ಅಧಿಕಾರಿ ತನ್ನ ಪುಟ್ಟ ಮಗಳೊಂದಿಗೆ ಬರುತ್ತಾನೆ, ಆಗ ರೈಲು ವಾಪಸ್ ಬರುತ್ತದೆ, ಆಗ ಬಾಲಕನನ್ನು ಹಿಂದಕ್ಕೆ ಕಳಿಸಿ ಅವನ ಜಾಗದಲ್ಲಿ ಆ ಪುಟ್ಟ ಬಾಲಕಿಯನ್ನು ಕೂರಿಸುತ್ತಾಳೆ, ನಿರ್ದೇಶಕರು ಇಲ್ಲಿ ಆ ಕಾಲದಲ್ಲೇ ಬಡವ, ಶ್ರೀಮಂತ, ಅಧಿಕಾರದ ಗತ್ತು ಇತ್ತೆಂದು ಹೇಳಲು ಹೊರಟಿದ್ದಾರೆ.
ಮೂಕಿ ಚಿತ್ರಕ್ಕೆ ಪಾಶ್ಚಿಮಾತ್ಯ ಸಂಗೀತದ ಟಚ್ ನೀಡಿದ್ದು, ಚಿತ್ರವನ್ನು ನೋಡುತ್ತಿದ್ದರೆ ಚಾರ್ಲಿಚಾಪ್ಲಿನ್ ಚಿತ್ರ ನೋಡುವ ಫೀಲಿಂಗ್ ಸಿಗುತ್ತದೆ. ಚಿತ್ರವು ಕಪ್ಪು- ಬಿಳುಪು ಬಣ್ಣದಲ್ಲಿದೆ. ಮಾಸ್ಟರ್ ಮಧುರಚೆನ್ನಿಗಸುಬ್ಬಣ್ಣ, ಗಿರಿ ಜಾಸಿದ್ದಿ ನಟಿಸಿದ್ದಾರೆ.ಟಿ.ಲಕ್ಷ್ಮೀಕುಮಾರಿ ಮತ್ತು ದರ್ಶಿನಿವಿನಯ್ಕುಮಾರ್ ನಿರ್ಮಾಣವಿದೆ. ಬಡತನ, ಸ್ಥಳಾಂತರ, ಸಂದರ್ಭಗಳು, ವಿನಾಶ ಹಾಗೂ ಮಾನವೀಯತೆ ಇವೆಲ್ಲವು ಎರಡನೆದಯರಲ್ಲಿ ಎರಡು ಪಾತ್ರಗಳ ಮೂಲಕ ತೋರಿಸಲಾಗಿದೆ. ವಿಠಲ್ಕಾಮತ್, ಸೂರ್ಯನಾರಾಯಣ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಶ್ಯಾಂಹೊನ್ನೂರು ಬಂಡವಾಳ ಹೂಡಿದ್ದಾರೆ.ಎರಡು ಚಿತ್ರಗಳಿಗೂ ಛಾಯಾಗ್ರಹಣ ನಂದೀಶ್ರಾಮ್, ಸಂಗೀತ ವೈಶಾಕ್ಭಾರ್ಗವ್ ಕೆಲಸ ನಿರ್ವಹಿಸಿದ್ದಾರೆ. ಇಚೆಗೆವಿಶೇಷ ಪ್ರದರ್ಶನಏರ್ಪಾಟು ಮಾಡಲಾಗಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ನಿರ್ಮಾಪಕರುಗಳಾದ ಟಿ.ಆರ್.ಚಂದ್ರಶೇಖರ್, ಬಿ.ಸುರೇಶ್ ಮುಂತಾದಗಣ್ಯರುವೀಕ್ಷಿಸಿದರು.
ದಿ ಟ್ರೈನ್ ಹಾಗೂ ಎರಡು ಗೋಡೆಗಳು ಎಂಬ ಕಿರುಚಿತ್ರಗಳಲ್ಲಿ ತನ್ನ ನಿರ್ದೇಶನದ ಜಾಣ್ಮೆಯನ್ನು ಮೆರೆದಿರುವ ಮೈಸೂರಿನ ವಿನಯ್ ಕುಮಾರ್ ಬೆಳ್ಳಿತೆರೆಯಲ್ಲೂ ಉತ್ತಮ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ.
Pingback: best dumps store