ನಾಲ್ಕನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಮಾರ್ಚ್ 5 ರಂದು ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಟ್ಟಿ ಹಾಗೂ 2023ನೇ ವರ್ಷದ ಟ್ರೋಫಿ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.
ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡುತ್ತಾ ಬಂದಿರುವ ಚಂದವನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ, ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತಾ ಬಂದಿದೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ತನ್ನ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ್ದು, ಈ ಐದೂ ಪ್ರಶಸ್ತಿಗಳಿಗೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಮಹನಿಯರ ಹೆಸರುಗಳನ್ನು ನಾಮಕರಣ ಮಾಡಿದೆ.
ಅತ್ಯುತ್ತಮ ನಟ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಟಿ (ಡೆಬ್ಯು) ಪ್ರಶಸ್ತಿಯನ್ನು ಕನ್ನಡದ ಮೊದಲ ಚಿತ್ರದ ನಾಯಕಿ ತ್ರಿಪುರಾಂಭ ಹೆಸರಿನಲ್ಲಿ, ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹೆಸರಾಂತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಿರ್ಮಾಪಕ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ, ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ಚಿ.ಉದಯಶಂಕರ್ ಹೆಸರಿನಲ್ಲಿ ಪ್ರದಾನ ಮಾಡಲಾಗುತ್ತಿದೆ.
ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ನಟಿಯರಾದ ಇತಿ ಆಚಾರ್ಯ, ಪಾವನಾ ಗೌಡ ಮತ್ತು ಸಂಗೀತಾ ಭಟ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೋಫಿ ಅನಾವರಣ ಮಾಡಿದರು. ಸಿನಿಮಾ ವಿಮರ್ಶಕರು ನೀಡುವ ದಕ್ಷಿಣ ಭಾರತದ ಮೊದಲ ಪ್ರಶಸ್ತಿ ಇದಾಗಿದ್ದರ ಬಗ್ಗೆ ಕೊಂಡಾಡಿದರು.
ನಾಮಿನೀಸ್ ಲಿಸ್ಟ್ :
1. ಅತ್ಯುತ್ತಮ ಚಿತ್ರ
-
ಕಾಂತಾರ
-
ಕೆಜಿಎಫ್ 2
-
ಧರಣಿ ಮಂಡಲ ಮಧ್ಯದೊಳಗೆ
-
777 ಚಾರ್ಲಿ
-
ವ್ಹೀಲ್ ಚೇರ್ ರೋಮಿಯೋ
-
ಅತ್ಯುತ್ತಮ ನಿರ್ದೇಶಕ
-
ಪ್ರಶಾಂತ್ ನೀಲ್ (ಕೆಜಿಎಫ್2)
-
ರಿಷಬ್ ಶೆಟ್ಟಿ (ಕಾಂತಾರ)
-
ಕಿರಣ್ ರಾಜ್ ( 777 ಚಾರ್ಲಿ)
-
ಅನೂಪ್ ಭಂಡಾರಿ (ವಿಕ್ರಾಂತ್ ರೋಣ)
-
ಜಡೇಶ್ ಹಂಪಿ (ಗುರು ಶಿಷ್ಯರು)
3. ಅತ್ಯುತ್ತಮ ಚಿತ್ರಕಥೆ
-
ಕಾಂತಾರ ( ರಿಷಭ್ ಶೆಟ್ಟಿ)
-
777 ಚಾರ್ಲಿ (ಕಿರಣ್ ಕೆ)
-
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ )
-
ಡಾರ್ಲಿಂಗ್ ಕೃಷ್ಣ ( ಲವ್ ಮಾಕ್ಟೇಲ್ 2)
-
ಕೆಜಿಎಫ್ 2 (ಪ್ರಶಾಂತ್ ನೀಲ್)
4.ಅತ್ಯುತ್ತಮ ಸಂಭಾಷಣೆ
-
ಗುರು ಶಿಷ್ಯರು (ಮಾಸ್ತಿ)
-
ವೇದ ( ರಘು ನಿಡುವಳ್ಳಿ)
-
ವ್ಹೀಲ್ ಚೇರ್ ರೋಮಿಯೋ (ನಟರಾಜ್ ಜಿ)
-
777 ಚಾರ್ಲಿ (ಕಿರಣ್ ಕೆ, ರಾಜ್ ಬಿ.ಶೆಟ್ಟಿ, ಅಭುಜಿತ್ ಮಹೇಶ್
-
ಕಾಂತಾರ (ರಿಷಭ್ ಶೆಟ್ಟಿ)
Be the first to comment