ಶೋಕಿವಾಲ ಚಿತ್ರಕ್ಕೆ ಡಬ್ಬಿಂಗ್ ಪೂರ್ಣ

ಅಜಯ್ ರಾವ್ ಅಭಿನಯ ಶೋಕಿವಾಲ ಚಿತ್ರದ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಡಬ್ಬಿಂಗ್ ಸಹ ಮುಕ್ತಾಯವಾಗಿದೆ.

ಡಬ್ಬಿಂಗ್ ಸಮಯದಲ್ಲಿ ಚಿತ್ರವನ್ನು ವೀಕ್ಷಿಸಿದ ಚಿತ್ರದ ಕಲಾವಿದರು ‘ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದು ತಿಳಿಸಿದ್ದು, ನನಗೆ ಅವರ ಪ್ರಶಂಸೆಯ ಮಾತು ಸಂತಸ ತಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಉತ್ತಮ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೂ‌ ಜಾಕಿ ಧನ್ಯವಾದ ತಿಳಿಸಿದ್ದಾರೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಜಾಕಿ ನಿರ್ದೇಶಿಸುತ್ತಿದ್ದಾರೆ.. ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಬಿರುಸಿನಿಂದ ನಡೆಯುತ್ತಿದೆ..
ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್ ಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ .

ಮೊದಲ ಬಾರಿ ಅಜಯ್ ರಾವ್ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ಅವರಿಗೂ ಹಳ್ಳಿ ಹುಡುಗಿಯಾಗಿ ಮೊದಲ ಪಾತ್ರ.

ನಿರ್ಮಾಪಕರಿಗೆ ನಾನು 50 ದಿನದಲ್ಲಿ ಚಿತ್ರೀಕರಣ ಮಾಡ್ತೀನಿ ಅಂತ ಹೇಳಿದ್ದೆ , ನೋ ಪ್ರಾಬ್ಲಮ್ ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಮಾಡಿ ಜಾಕಿ ಎಂದರು . ಇವತ್ತು 45 ದಿನಕ್ಕೆ ಮುಗಿಸಿದ್ದೇನೆ ತುಂಬಾ ಖುಷಿಯಲ್ಲಿದ್ದಾರೆ. ನಿರ್ಮಾಪಕರ ನಿರ್ದೇಶಕ ನೀನು ಅಂತ ಹೇಳಿದ್ದಾರೆ .

ಚನ್ನಪಟ್ಟಣ, ಹೊಂಗನೂರು, ವಿರೂಪಾಕ್ಷ ಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು,ತುಮಕೂರು ,
ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.

ಈ ಚಿತ್ರದ ಹಾಡುಗಳನ್ನು lockdown ಮುಗಿದ ಮೇಲೆ ಬಿಡುಗಡೆ ಮಾಡುತ್ತೇವೆ .ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯ ‘ಶೋಕಿವಾಲ’ನಿಗಿದೆ.

ನವೀನ್ ಕುಮಾರ್.ಎಸ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ , ಪ್ರಶಾಂತ್ ರಾಜಪ್ಪ ಸಂಭಾಷಣೆ, ಮೋಹನ್ ನೃತ್ಯ,ವಿಕ್ರಮ್ ಮೋರ್ ಸಾಹಸ ನಿರ್ದೇಶನ,
ಮೈಸೂರು ರಘು ರವರ ಕಲಾ ನಿರ್ದೇಶನ ಹಾಗೂ ಬಾಲು ಕುಮಟ ರವರ ನಿರ್ಮಾಣ ಮೇಲ್ವಿಚಾರಣೆ‌ ಈ‌ ಚಿತ್ರಕ್ಕಿದೆ.

ಎಲ್ಲಾ ಅಂದುಕೊಂಡಂತೆ ಅದರೆ ಅದಷ್ಟು ಬೇಗ ಚಿತ್ರಮಂದಿರಕ್ಕೆ ಶೋಕಿವಾಲ ಬರಲಿದ್ದಾನೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!