ಕೆಆರ್ ಜಿ ಸ್ಟುಡಿಯೋಸ್ ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ ‘ಶೋಧ’ ವೆಬ್ ಸಿರೀಸ್ ಆಗಸ್ಟ್ 22ರಂದು zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಸೈಕಲಾಜಿಕಲ್ ಥ್ರಿಲ್ಲರ್ ಲೂಸಿಯಾ ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್, ಶೋಧ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೋಧ ವೆಬ್ ಸರಣಿಗೆ ಸುನಿಲ್ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ ಕೆಆರ್ ಜಿ ಸ್ಟುಡಿಯೋ ಶೋಧ ವೆಬ್ ಸಿರೀಸ್ ಗೆ ಕೆಆರ್ ಜಿ ಬಂಡವಾಳ ಹೂಡಿದೆ. Zee5 ಜೊತೆ ಕೈ ಜೋಡಿಸುವ ಮೂಲಕ ಕೆಆರ್ ಜಿ ಸ್ಟುಡಿಯೋ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್ ಸರಣಿಗಳನ್ನು ಉಣಬಡಿಸುವ ತವಕದಲ್ಲಿದೆ.
ಶೋಧದಲ್ಲಿ ನಟಿಸುವುದು ನನಗೆ ಸಂಪೂರ್ಣ ಹೊಸ ಪ್ರಯಾಣವಾಗಿದೆ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು ಭಾವನೆಗಳನ್ನು ಹೊಸ ರೀತಿಯಲ್ಲಿ ಅನ್ವೇಷಿಸಲು ನನಗೆ ಸವಾಲು ಹಾಕಿದೆ” ಎಂದು ಪವನ್ ಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಯ್ಯನ ಮನೆ ಸಕ್ಸಸ್ ಬಳಿ Zee5ನಲ್ಲಿ ‘ಶೋಧ’ ಸ್ಟ್ರೀಮಿಂಗ್ ಆಗಲಿದೆ.






Be the first to comment