ದರ್ಶನ್‌ಗೆ ಶಾಕ್‌

ಡೆವಿಲ್‌ ಸಿನಿಮಾಗಾಗಿ ಪ್ರವಾಸಿಗರ ಸ್ವರ್ಗ ಸ್ವಿಜರ್ಲ್ಯಾಂಡ್ ಹೋಗಬೇಕು ಎಂದುಕೊಂಡಿದ್ದ ದರ್ಶನ್‌ಗೆ ಶಾಕ್‌ ಎದುರಾಗಿದೆ.

ದರ್ಶನ್‌ ತಮ್ಮ ಲಕ್ಕಿ ಜಾಗ ಸ್ವಿಜರ್ಲ್ಯಾಂಡ್‌ನಲ್ಲಿ ಡೆವಿಲ್‌ ಸಿನಿಮಾ ಶೂಟಿಂಗ್‌ಗೆ ಪ್ಲ್ಯಾನ್‌ ಮಾಡಿಕೊಂಡಿದ್ದರು. ರೇಣುಕಾಸ್ವಾಮಿ  ಕೊಲೆ ಆರೋಪದ ಹಿನ್ನೆಲೆ ದರ್ಶನ್‌ಗೆ ವೀಸಾ ಕೊಡಲು ಸ್ವಿಜರ್ಲ್ಯಾಂಡ್‌ ನಿರಾಕರಣೆ ಮಾಡಿದೆಯಂತೆ. ಹೀಗಾಗಿ  ಕೊಲೆ ಆರೋಪಿ ದರ್ಶನ್‌ ಥೈಲ್ಯಾಂಡ್ ನಲ್ಲಿ ಶೂಟಿಂಗ್‌ಗಾಗಿ ಕೋರ್ಟ್‌ ಅನುಮತಿ ಕೋರಿದ್ದರು. ಅದರಂತೆ  ಇದೇ ತಿಂಗಳ 30ರವರೆಗೆ ಥೈಲ್ಯಾಂಡ್‌ ಪ್ರಯಾಣಕ್ಕೆ ಕೋರ್ಟ್‌ ಅನುಮತಿ  ನೀಡಿದೆ.

ದರ್ಶನ್ ವೃತ್ತಿ ಬದುಕಿನಲ್ಲಿ ಸ್ವಿಜರ್ಲ್ಯಾಂಡ್‌ಗೆ ವಿಶೇಷಸ್ಥಾನವಿದೆ. ‘ಪೋರ್ಕಿ ಸಿನಿಮಾದಿಂದ ಹಿಡಿದು ರಾಬರ್ಟ್‌ವರೆಗೆ ದ ಹಲವು ಚಿತ್ರಗಳ ಚಿತ್ರೀಕರಣ ಸ್ವಿಜರ್ಲ್ಯಾಂಡ್‌ ನಲ್ಲಿ ನಡೆದಿದೆ. ಒಂದರ್ಥದಲ್ಲಿ ಸ್ವಿಜರ್ಲ್ಯಾಂಡ್‌ ಇರದ ದರ್ಶನ್ ಅವರ ಚಿತ್ರ ಅಪೂರ್ಣ.  ‘ಡೆವಿಲ್‌’ ಶೂಟಿಂಗ್ ಗೆ ಸ್ವಿಜರ್ಲ್ಯಾಂಡ್‌ ಗೆ ಹೋಗಬೇಕಿದ್ದ ದರ್ಶನ್‌ಆಸೆ ಈಡೇರಿಲ್ಲ.   ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ದರ್ಶನ್ ಥೈಲ್ಯಾಂಡ್‌ಗೆ ಹೋಗಿದ್ದಾರೆ.‌

ಪುಕೆಟ್‌ನಲ್ಲಿ ಡೆವಿಲ್‌ ಚಿತ್ರತಂಡ ಬೀಡು ಬಿಟ್ಟಿದೆ . ನಿರ್ದೇಶಕ ಮಿಲನಾ ಪ್ರಕಾಶ್‌ ಇಲ್ಲಿ ಹಾಡು ಮತ್ತು ಒಂದು ಸಾಹಸ ಸನ್ನಿವೇಶವನ್ನು ಸೆರೆ ಹಿಡಿಯುವ ಪ್ಲ್ಯಾನ್‌ ಮಾಡಿದ್ದಾರಂತೆ. ಈ  ಚಿತ್ರೀಕರಣ ಮುಗಿದರೆ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾದಂತೆ ಎಂಬ ಮಾತು ಕೇಳಿ ಬರುತ್ತಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!