ಕಮಲ್‌ ಗೆ ಶಾಕ್‌ ಕೊಟ್ಟ ನೆಟ್‌ಫ್ಲಿಕ್ಸ್?

ಕಮಲ್‌ ಹಾಸನ್‌ ನಟಿಸಿ ನಿರ್ಮಿಸಿದ್ದ ‘ಥಗ್‌ ಲೈಫ್‌’ ಗೆ  ಕಡಿಮೆ ಮೊತ್ತಕ್ಕೆ ಸ್ಟ್ರೀಮಿಂಗ್‌ ಹಕ್ಕನ್ನು ಪಡೆಯಲು ನೆಟ್‌ ಫ್ಲಿಕ್ಸ್‌ ಮುಂದಾಗಿದೆ ಎನ್ನಲಾಗುತ್ತಿದೆ.

‘ಥಗ್‌ ಲೈಫ್‌’ ಬಿಡುಗಡೆಗೂ ಮೊದಲೇ ನೆಟ್‌ ಫ್ಲಿಕ್ಸ್‌ 130 ಕೊಟ್ಟು ಬಿಕರಿಯಾಗಿತ್ತು ಎಂಬ ಸುದ್ದಿ ಇದೆ.  ಥಗ್‌ ಲೈಫ್‌ ಸಿನಿಮಾ ಬಾಕ್ಸಾಫೀಸ್‌ ನಲ್ಲಿ ಸೋತು ಸುಣ್ಣವಾಗಿದೆ. ಈಗ  ನೆಟ್‌ ಫ್ಲಿಕ್ಸ್‌  20-25% ಕಡಿತದೊಂದಿಗೆ ಒಪ್ಪಂದವನ್ನು ಮರುಪರಿಶೀಲಿಸಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಕನ್ನಡಿಗರ ಕಣ್ಣು ಕೆಂಪಾಗಿಸಿದ್ದ ಕಮಲ್‌ ಗೆ ಮತ್ತೊಂದು ಶಾಕ್‌ ಎದುರುರಾಗಿದೆ. ಕರುನಾಡಲ್ಲಿ ಕಮಲ್‌ ಹಾಸನ್‌ ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಫುಲ್‌ ಸ್ಟಾಪ್‌ ಬಿದ್ದಿದೆ. 200 ಕೋಟಿ ಬಜೆಟ್‌ ಸಿನಿಮಾ 50 ಕೋಟಿ ಕೂಡ ಗಳಿಸಿಲ್ಲ ಎನ್ನಲಾಗುತ್ತಿದೆ. ಈಗ ಥಗ್‌ ಲೈಫ್‌ ಒಟಿಟಿ ರೈಟ್ಸ್‌ ಮೇಲೆ ಎಫೆಕ್ಟ್‌ ಬೀರಿದೆ.

ಕಮಲ್‌-  ಮಣಿರತ್ನಂ  3 ದಶಕದ ಬಳಿಕ ಒಂದಾಗಿ ‘ಥಗ್‌ ಲೈಫ್‌’ ಚಿತ್ರ ಮಾಡಿದ್ದರು. ಆದರೆ  ಈ ಜೋಡಿ ಮೋಡಿ ಮಾಡುವಲ್ಲಿ ವಿಫಲವಾಗಿದೆ. ಚಿತ್ರದಲ್ಲಿ ತ್ರಿಷಾ, ಸಿಂಬು ಸೇರಿದಂತೆ ಬಹುದೊಡ್ಡ ತಾರಾಬಳಗ  ನಟಿಸಿತ್ತು.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!